ಹೆಗ್ಗನಹಳ್ಳಿಯ ಶ್ರೀಗಂಧನಗರದಲ್ಲಿ ವಾಸವಾಗಿದ್ದ ಶ್ರೀನಿವಾಸ್, ಕಳೆದ 8 ವರ್ಷಗಳ ಹಿಂದೆ ಸಂಧ್ಯಾ ಎಂಬಾಕೆಯೊಂದಿಗೆ ವಿವಾಹವಾಗಿದ್ದ. ದಂಪತಿಗೆ ಆರು ವರ್ಷದ ಮಗನಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಶ್ರೀನಿವಾಸ್, ವಯಸ್ಸಾದ ತನ್ನ ತಾಯಿಯನ್ನು ಕರೆತಂದು ಇರಿಸಿಕೊಂಡಿದ್ದ. ಇದಕ್ಕೆ ಪತ್ನಿ ಗಂಡನೊಂದಿಗೆ ಮುನಿಸಿಕೊಂಡಿದ್ದಳು ಎನ್ನಲಾಗಿದೆ. ದಂಪತಿ ನಡುವೆ ಪ್ರತಿದಿನ ಜಗಳವಾಗುತಿತ್ತು. ನಮಗೆ ಇರುವುದಕ್ಕೆ ಕಷ್ಟ..ಇನ್ನೂ ತಾಯಿಯನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಪತಿಯೊಂದಿಗೆ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಮನನೊಂದ ತಾಯಿ-ಮಗ ಇಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.