ಶೀಘ್ರವೇ ಬರ ಅನುದಾನ ಬಿಡುಗಡೆ ಮಾಡಿಸಲು ಕೇಂದ್ರಕ್ಕೆ ಒತ್ತಾಯ

ಸೋಮವಾರ, 9 ಅಕ್ಟೋಬರ್ 2023 (16:42 IST)
ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿ ನಡೆಸ್ತಿದ್ದು ಸುದ್ದಿಗೋಷ್ಟಿಯಲ್ಲಿ ಕೇಂದ್ರದಿಂದ ಆಗಮಿಸಿರುವ ಬರ ಸಮೀಕ್ಷಾ ತಂಡ ನಮ್ಮ ಮನವಿ ಅನುಸಾರ ರಾಜ್ಯದಲ್ಲಿ ಪರಿಶೀಲನಾ ಪ್ರವಾಸ ನಡೆಸುತ್ತಿದೆ. ನರೇಗಾ, ಪಶು ಆಹಾರ, ಮೇವಿನ ಪೂರೈಕೆ, ಬರದ ಸ್ಥಿತಿಗತಿ ಹಾಗೂ ವಸ್ತುಸ್ಥಿತಿಯ ಪರಿಶೀಲನೆ ನಡೆಸಿದೆ. ರಾಜ್ಯದ ವರದಿ ಬಗ್ಗೆ,ನಿಖರ ಕಾರ್ಯವೈಖರಿ ಬಗ್ಗೆ ತಂಡ ಮೆಚ್ಚುಗೆ ಸೂಚಿಸಿದೆ.ಮುಂದಿನ ದಿನಗಳಲ್ಲಿ ಇದೇ ಸ್ಥಿತಿ ಮುಂದುವರೆದರೆ ಹಿಂಗಾರು ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಆಗಬಹುದೆಂಬ ಆತಂಕವನ್ನ ಕೇಂದ್ರ ತಂಡವೂ ವ್ಯಕ್ತಪಡಿಸಿದೆ.ರಾಜ್ಯದ ಬರ ಸನ್ನಿವೇಶ ತೀವ್ರವಾಗಿದೆ ಎಂದು ಕೇಂದ್ರ ತಂಡ ಮನವರಿಕೆ ಮಾಡಿಕೊಂಡಿದೆ.
 
ಮುಂದಿನ ವಾರ ಸಪ್ಲಿಮೆಂಟರಿ ಬರ ಸಮೀಕ್ಷೆ ವರದಿ ಸಲ್ಲಿಸಲು ನಿರ್ಧಾರ ಮಾಡಿದೆ.ಅತಿಸಣ್ಣ ರೈತರ ಅಂಕಿಅಂಶ ಕೇಂದ್ರ ತಂಡ ಪಡೆಯುತ್ತಿದ್ದಾರೆ.ವಿಚಿತ್ರ ಹವಾಮಾನ ಸನ್ನಿವೇಶದ ನಿದರ್ಶನ ಇದಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಬೇಕಿದೆ ಎಂದು ಕಂದಾಯ ಸಚಿವ ಕೇಂದ್ರ ಬರ ಅಧ್ಯಯನ ಸಮಿತಿ ತಂಡದವರಿಗೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ