ಬೆಂಗಳೂರು: ಬೀದಿ ನಾಯಿಗಳು ಕೆಲವೊಮ್ಮೆ ಸಾಕಿದ ನಾಯಿಗಳಿಗಿಂತಲೂ ಹೆಚ್ಚು ಬುದ್ಧಿವಂತರಾಗಿರುತ್ತವೆ. ಇದಕ್ಕೆ ಈ ನಾಯಿಯೇ ಸಾಕ್ಷಿ. ನನ್ನನ್ನೂ ಮನೆಗೆ ಕರೆದುಕೊಂಡು ಹೋಗ್ತೀಯಾ ಎಂದು ಕೇಳುತ್ತಿರುವ ಈ ನಾಯಿಯ ವಿಡಿಯೋ ನಿಮ್ಮ ಹೃದಯವನ್ನೂ ಗೆಲ್ಲುತ್ತದೆ.
ಸಾಮಾನ್ಯವಾಗಿ ಉತ್ತಮ ತಳಿಯ ನಾಯಿಗಳನ್ನೇ ಎಲ್ಲರೂ ಸಾಕೋದು. ಅದಕ್ಕೆ ತಮ್ಮ ಭಾಷೆ ಅರ್ಥವಾಗುವಂತೆ ಟ್ರೈನ್ ಮಾಡಿರುತ್ತಾರೆ. ಆದರೆ ಕೆಲವೊಂದು ಬೀದಿ ನಾಯಿಗಳೂ ಮನುಷ್ಯನ ಭಾಷೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದರಂತೇ ನಡೆದುಕೊಳ್ಳುತ್ತವೆ.
ಇಲ್ಲೊಬ್ಬ ವ್ಯಕ್ತಿ ತನ್ನ ಟ್ರೈನ್ ಆದ ನಾಯಿಯನ್ನು ರಸ್ತೆಯಲ್ಲಿ ಸಂಕೋಲೆ ಸಮೇತ ತೆಗೆದುಕೊಂಡು ಹೋಗುತ್ತಾನೆ. ಇದ್ದಕ್ಕಿದ್ದಂತೆ ಆತ ನಡು ರಸ್ತೆಯಲ್ಲಿ ತನ್ನ ನಾಯಿಗೆ ರಸ್ತೆಯಲ್ಲಿ ಉಲ್ಟಾ ಮಲಗಿ ಹೊರಳಾಡುವಂತೆ ಸೂಚನೆ ನೀಡುತ್ತಾನೆ.
ಆದರೆ ಯಾಕೋ ನಾಯಿಗೆ ಮೂಡ್ ಇರುವುದಿಲ್ಲ. ಸುಮ್ಮನೇ ಮಲಗಿರುತ್ತದೆ. ಇದನ್ನೇ ಪಕ್ಕದಲ್ಲೇ ನಿಂತು ಗಮನಿಸುತ್ತಿದ್ದ ಬೀದಿ ನಾಯಿ ಆತನ ಬಳಿ ಬಂದು ತಾನಾಗಿಯೇ ಆತ ಹೇಳಿದಂತೆ ಮಾಡುತ್ತದೆ. ಈ ವಿಡಿಯೋದಲ್ಲಿ ನಾಯಿಯ ಮುಖಭಾವ ನೋಡಿದರೆ ನಾನು ನೀನು ಹೇಳಿದಂತೆ ಮಾಡಿರುವೆ ನನ್ನನ್ನೂ ನಿನ್ನ ಮನೆಗೆ ಕರೆದುಕೊಂಡು ಹೋಗ್ತೀಯಾ ಎನ್ನುವಂತಿದೆ. ಈ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ.