ರಾಜ್ಯಸಭೆಯ 4 ಸ್ಥಾನಕ್ಕೆ ಮತದಾನ; ಸಂಜೆ ಮತ ಎಣಿಕೆ

ಶುಕ್ರವಾರ, 23 ಮಾರ್ಚ್ 2018 (07:23 IST)
ಬೆಂಗಳೂರು : ಶುಕ್ರವಾರ (ಇಂದು), ರಾಜ್ಯಸಭೆಯ 4 ಸ್ಥಾನಕ್ಕೆ ಮತದಾನ ನಡೆಯಲಿದ್ದು, ಬೆಳಿಗ್ಗೆ 9ರಿಂದ ಸಂಜೆ 4 ರವರೆಗೆ ಮತದಾನ ನಡೆಸಿ, 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಡೆಸುವುದಾಗಿ ತಿಳಿದುಬಂದಿದೆ.


ರಾಜ್ಯಸಭೆಯ 4 ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ಜೆ.ಸಿ. ಚಂದ್ರಶೇಖರ್, ಬಿಜೆಪಿಯಿಂದ  ಹಾಲಿ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್‌ನ ಬಿ.ಎಂ. ಫಾರೂಕ್ ಸೇರಿ ಐವರು ಸ್ಪರ್ಧಿಸಲಿದ್ದಾರೆ.


ರಾಜ್ಯಸಭೆಯ 4 ಸ್ಥಾನಗಳ ಮತದಾನದ ಹಿನ್ನಲೆಯಲ್ಲಿ ಬಿಜೆಪಿ  ಪಕ್ಷದ ಎಲ್ಲಾ ಶಾಸಕರಿಗೆ ವಿಪ್  ಜಾರಿಗೊಳಿಸಿದ್ದು, ಪಕ್ಷದ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಪರ ಮತ ಹಾಕುವಂತೆ ಸೂಚಿಸಿದೆ. ಹಾಗೆ ಮತದಾನದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಒಂದು ಬೆಳಿಗ್ಗೆ 9ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಸೂಚನೆ ನೀಡುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ