BJP ಅಭ್ಯರ್ಥಿ ಆಯ್ಕೆಗಾಗಿ ವೋಟಿಂಗ್​

ಶುಕ್ರವಾರ, 31 ಮಾರ್ಚ್ 2023 (16:50 IST)
ಚುನಾವಣೆ ಗೆಲುವಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಮಾಸ್ಟರ್ ಪ್ಲಾನ್ ರೇಡಿ ಮಾಡಿದೆ. ಇಂದು BJP ಅಭ್ಯರ್ಥಿ ಆಯ್ಕೆಗೆ ಓಪನ್ ವೋಟಿಂಗ್ ಪ್ರಕ್ರಿಯೆ ಆರಂಭಿಸಿದೆ. RSS ಹಿನ್ನೆಲೆ, ಸಮಾಜಸೇವೆ, ಅತ್ಯುತ್ತಮ ಕಾರ್ಯಕರ್ತರು ಹಾಗೂ ಸೆಲೆಬ್ರೆಟಿಗಳಿಗೆ BJP ಮಣೆ ಹಾಕಲಿದೆ. ಇದರಿಂದಾಗಿ ಹಾಲಿ ಶಾಸಕರಿಗೆ ನಡುಕ ಶುರುವಾಗಿದೆ. BJP ಆಂತರಿಕ ಮತದಾನದ ಮೂಲಕ ಅಭ್ಯರ್ಥಿ ಆಯ್ಕೆಗೆ ಮತದಾನ ಪ್ರಕ್ರಿಯೆ ಆರಂಭಿಸಿದ್ದು, ಪಕ್ಷದ ಪದಾಧಿಕಾರಿಗಳು, ಮುಖಂಡರಿಂದ ತಲಾ ಮೂರು ಅಭ್ಯರ್ಥಿಗಳಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.. ಬೆಂಗಳೂರಿನ ಮೂರು ಕಡೆಗಳಲ್ಲಿ ಮತದಾನ ಕೇಂದ್ರ ತೆರೆದಿದ್ದು, ಕ್ಷೇತ್ರದ ಬಿಜೆಪಿ ಮುಖಂಡರಿಂದ ಮತದಾನ ನಡೆಸಲಾಗ್ತಿದೆ. ಈ ಬಾರಿ ಎಲೆಕ್ಷನ್‌ನಲ್ಲಿ 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್‌ ನೀಡಲಾಗುತ್ತದೆಯಾ ಎಂಬ ಚರ್ಚೆ ಶುರುವಾಗಿದೆ. ಕಳೆದ ಬಾರಿ ಸೋತ ಅಭ್ಯರ್ಥಿಗಳಿಗೆ ಈ ಸಲ ಟಿಕೆಟ್ ಮಿಸ್ ಆಗುವ ಸಾಧ್ಯತೆ ಹೆಚ್ಚಾಗಿದೆ.. ಅಭ್ಯರ್ಥಿಗಳ ಆಯ್ಕೆಗೆ ಇಂದು ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಕ್ಕೆ BJP ಮುಂದಾಗಿದೆ. ಮುಂದಿನ 2 ದಿನ ಜಿಲ್ಲಾ ಕೋರ್ ಕಮಿಟಿ ಸಭೆ ಮೂಲಕ ಅಭಿಪ್ರಾಯ ಸಂಗ್ರಹ ಮಾಡಲಿದೆ. ಅಚ್ಚರಿಯ ಆಯ್ಕೆಯ ಮೂಲಕ BJP ಹೈಕಮಾಂಡ್ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ