ನಗರ ಪ್ರದೇಶದ ನಿವಾಸಿಗಳಿಗೆ ನೀರಿನ ಸಮಸ್ಯೆ

ಗುರುವಾರ, 14 ಸೆಪ್ಟಂಬರ್ 2023 (10:03 IST)
ಹಾಸನ : ಹೆಚ್ಚು ಮಳೆಯಾಗದ ಕಾರಣ ಹಾಸನ ನಗರ ಪ್ರದೇಶದ ನಿವಾಸಿಗಳಿಗೆಈಗ ನೀರಿನ ಸಮಸ್ಯೆ ಎದುರಾಗುತ್ತಿದೆ.

ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಕೊಳವೆ ಪೈಪ್ನಿಂದ ಕೆಳಮಟ್ಟಕ್ಕೆ ನೀರು ಕುಸಿದಿದೆ. ಇದರಿಂದಾಗಿ ಹಾಸನ ನಗರ ನೀರು ಸರಬರಾಜು ಯೋಜನೆಯ ಕೆಳಮಟ್ಟದ ನೀರೆತ್ತುವ ಯಂತ್ರಗಾರಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ. 

ಮಳೆ ಕೊರತೆಯಿಂದ ಈ ಬಾರಿ ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ. ಇದರ ನಡುವೆಯೂ ನಾಲೆಗಳಿಗೆ ಹಾಗೂ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹೇಮಾವತಿ ನದಿ ನೀರು ಖಾಲಿಯಾಗುತ್ತಿದ್ದು, ಕುಡಿಯುವ ನೀರು ಪೂರೈಕೆ ಮಾಡುವ ನೀರಿನ ಪೈಪ್ನಿಂದ ಕೆಳಮಟ್ಟಕ್ಕೆ ನೀರು ಕುಸಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ