ಮಳೆಗಾಗಿ ಕಪ್ಪೆಗಳ ಮದುವೆ

ಬುಧವಾರ, 28 ಜೂನ್ 2023 (16:57 IST)
ರಾಜ್ಯದಲ್ಲಿ ವರುಣನ ಮುನಿಸು ಮುಂದುವರೆದಿದ್ದು, ವರುಣ ದೇವನನ್ನ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿಸಲಾಗಿದೆ. ಮೈಸೂರು ಜಿಲ್ಲೆಯ ಹೆಚ್​.ಡಿ.ಕೋಟೆ ತಾಲೂಕಿನ ಕೆ.ಜಿ.ಹುಂಡಿ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ಕಪ್ಪೆಗಳ ದಿಬ್ಬಣವನ್ನ ಹೊತ್ತ ಗ್ರಾಮದ ಮಕ್ಕಳು ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಕಪ್ಪೆಗಳ ಮದುವೆ ಮಾಡಿಸಿ ಮಳೆ ಬರುವಂತೆ ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ