ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಭೇಟಿ ನೀಡಿದ ಹೆಚ್.ಡಿ.ದೇವಗೌಡರು ಹೇಳಿದ್ದೇನು ಗೊತ್ತಾ..?

ಸೋಮವಾರ, 22 ಜನವರಿ 2018 (10:30 IST)
ಮಂಗಳೂರು : ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಕ್ಕೀಡಾದ ದೀಪಕ್ ರಾವ್ ಹಾಗು ಬಶೀರ್  ಅವರ ಮನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

 
ಮೊದಲು ನಗರದ ಜೆಡಿಎಸ್ ಮುಖಂಡರೊಂದಿಗೆ ಹೆಚ್.ಡಿ.ದೇವಗೌಡರು ಕಾಟಿಪಳ್ಳಿಯಲ್ಲಿರುವ  ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಿ ದೀಪಕ್ ಅವರ ತಾಯಿ ಪ್ರೇಮಾ ಅವರ ಪರಿಸ್ಥಿತಿ ಕಂಡು ದುಃಖಿತರಾದ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಬಶೀರ್ ಅವರ ಮನೆಗೆ ಭೇಟಿ ನೀಡಿ ಬಶೀರ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವುದರ ಜೊತೆಗೆ ಬಶೀರ್ ಅವರ ಕಿರಿಯ ಮಗನ ಬಯೋಡಾಟಾ ಪಡೆದು ಆತನಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ