ಪುರಸಭೆ ಸದಸ್ಯನಿಗೆ ನಡುರೋಡಲ್ಲೇ ಜನರು ಮಾಡಿದ್ದೇನು?

ಶುಕ್ರವಾರ, 24 ಮೇ 2019 (16:37 IST)
ಮಾಜಿ ಪುರಸಭೆ ಸದಸ್ಯರೊಬ್ಬರು ಮಾಡಬಾರದ ಕೆಲಸ ಮಾಡಿದ್ದರಿಂದ ಜನರಿಂದ ತರಾಟೆಗೆ ಒಳಗಾಗಿದ್ದಾರೆ. 

ಕುಡಿಯುವ ನೀರು ಮಾರಾಟ ಮಾಡುತ್ತಿರುವ ಮಾಜಿ ಪುರಸಭೆ ಸದಸ್ಯ ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಬೇಕಿದ್ದ ನೀರನ್ನು ಮಾಜಿ ಪುರಸಭೆ ಸದಸ್ಯರೊಬ್ಬರು ಮಾರಾಟ ಮಾಡಿಕೊಂಡ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಾಂತಿ ನಗರದಲ್ಲಿ ನಡೆದ ಘಟನೆ ಇದಾಗಿದ್ದು, ಬೀರಪ್ಪ ಯಂಕಚ್ಚಿ ಎಂಬುವರಿಂದ ನೀರು ಮಾರಾಟ ದಂಧೆ ನಡೆಯುತ್ತಿದೆ.

ಬರಗಾಲದಲ್ಲಿ ಅಥಣಿ ಪಟ್ಟಣದ ವಾರ್ಡಗಳಿಗೆ ಉಚಿತ ನೀರು ಪೂರೈಸಲು ಟ್ಯಾಂಕರ್ ಹಾಕಿದ್ದು, ಅದಕ್ಕಾಗಿ ರಾಜ್ಯ ಸರ್ಕಾರದಿಂದ ಹಣ ಪಡೆದರು ಕೂಡ ಸಾರ್ವಜನಿಕರಿಂದ ಹಣ ಪಡೆದು ನೀರು ಮಾರಾಟಮಾಡಲಾಗುತ್ತಿತ್ತು. ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು ಬಿರಪ್ಪ ಯಂಕಚ್ಚಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಪುರಸಭೆ ಉಚಿತ ನೀರು ಪೂರೈಕೆ ಪೋಸ್ಟರ್ ಹಚ್ಚಿದ ವಾಹನದಲ್ಲಿ ನೀರು ಪೂರೈಸುತ್ತಿರುವ ಬೀರಪ್ಪ ಯಂಕಂಚಿ ವಾಹನಕ್ಕೆ ನಂಬರ್ ಆಗಲಿ, ಜಿಪಿಎಸ್ ಆಗಲಿ ಅಳವಡಿಸದೆ ನೀರು ಪೂರೈಕೆ ಮಾಡಿರುವುದಾಗಿ ಸುಳ್ಳು ಹೇಳಿ ಸರ್ಕಾರಕ್ಕೆ ವಂಚಿಸುತ್ತಿರುವ ಆರೋಪದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ