ಕೊಹ್ಲಿಯನ್ನು ನಾಲಾಯಕ್ ಕ್ಯಾಪ್ಟನ್ ಎಂದ ಗೌತಮ್ ಗಂಭೀರ್ ಗೆ ಟ್ವಿಟರಿಗರಿಂದ ತರಾಟೆ

ಬುಧವಾರ, 20 ಮಾರ್ಚ್ 2019 (09:35 IST)
ನವದೆಹಲಿ: ವಿರಾಟ್ ಕೊಹ್ಲಿ ತಾಂತ್ರಿಕವಾಗಿ ಉತ್ತಮ ನಾಯಕರಲ್ಲ. ಅವರ ನಾಯಕತ್ವದಲ್ಲಿ ಇದುವರೆಗೆ ಆರ್ ಸಿಬಿ ಒಂದೇ ಒಂದು ಐಪಿಎಲ್ ಗೆದ್ದಿಲ್ಲ. ಅವರನ್ನು ಇಷ್ಟು ದಿನ ನಾಯಕರಾಗಿ ಇಟ್ಟುಕೊಂಡಿದ್ದಕ್ಕೆ ಅವರು ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ಋಣಿಯಾಗಿರಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೀಡಿದ ಹೇಳಿಕೆ ಈಗ ಅವರಿಗೇ ಮುಳುವಾಗಿದೆ.


ಸಂದರ್ಶನವೊಂದರಲ್ಲಿ ಗಂಭೀರ್, ಕೊಹ್ಲಿ ಜಾಣ ನಾಯಕರಲ್ಲ. ಅವರನ್ನು ಏಳೆಂಟು ವರ್ಷಗಳಿಂದ ಆರ್ ಸಿಬಿ ಫ್ರಾಂಚೈಸಿ ನಾಯಕರಾಗಿ ಉಳಿಸಿಕೊಂಡಿರುವುದೇ ದೊಡ್ಡದು. ಯಾರಿಗೂ ಇಷ್ಟೊಂದು ಅವಕಾಶ ಸಿಕ್ಕಿಲ್ಲ. ಧೋನಿ, ರೋಹಿತ್ ಶರ್ಮಾಗೆ ಹೋಲಿಸಿದರೆ ಅವರು ಅಂತಹ ಉತ್ತಮ ನಾಯಕರಲ್ಲ ಎಂದು ಕೊಹ್ಲಿ ಬಗ್ಗೆ ಗಂಭೀರ್ ಟೀಕಿಸಿದ್ದರು.

ಇವರಿಬ್ಬರೂ ಮೈದಾನದಲ್ಲೂ ಐಪಿಎಲ್ ಸಂದರ್ಭದಲ್ಲಿ ಆವತ್ತು ಕಚ್ಚಾಡಿದ್ದು, ಇಂದಿಗೂ ಕ್ರಿಕೆಟ್ ಪ್ರಿಯರು ಮರೆತಿಲ್ಲ. ಅದೇ ವೈಷಮ್ಯವನ್ನು ಈಗಲೂ ಮುಂದುವರಿಸಿರುವ ಗಂಭೀರ್ ಕೊಹ್ಲಿ ಬಗ್ಗೆ ಟೀಕಿಸಿದ್ದು, ಕೊಹ್ಲಿ ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದೆ. ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿತ್ತು. ಆದರೆ ವೈಯಕ್ತಿಕ ವೈಷಮ್ಯವಿಟ್ಟುಕೊಂಡು ಈ ರೀತಿ ಕೊಹ್ಲಿ, ರವಿಶಾಸ್ತ್ರಿ ಬಗ್ಗೆ ಪದೇ ಪದೇ ಟೀಕಿಸುವುದು ಸರಿಯಲ್ಲ ಎಂದು ಹಲವರು ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ