ಗಾಧ್ರಿಪಾಲನಾಯಕನ ಬೆಟ್ಟದಲ್ಲಿ ಸಾಮೂಹಿಕವಾಗಿ ಮಾಡಿದ್ದೇನು?

ಗುರುವಾರ, 1 ಆಗಸ್ಟ್ 2019 (18:19 IST)
ಹಿರೇಗುಂಟನೂರು ಹೋಬಳಿ ವ್ಯಾಪ್ತಿಯಲ್ಲಿ ಹತ್ತೂರು ಜನರು ಹೈರಾಣಾಗಿದ್ದಾರೆ.

ಚಿತ್ರದುರ್ಗದ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಬರದ ಛಾಯೆ ಆವರಿಸಿದೆ. ಹೀಗಾಗಿ ಹಿರೇಗುಂಟನೂರಿನ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು, ತಮ್ಮ ತಮ್ಮ ಗ್ರಾಮಗಳ ಗ್ರಾಮ ದೇವರುಗಳನ್ನು, ಮೊದಲು ಕಡಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಂದಿದ್ದಾರೆ.

ಎಲ್ಲಾ ಊರಿನ ದೇವರುಗಳನ್ನು, ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ, ಗಾಧ್ರಿಪಾಲನಾಯಕನ ಬೆಟ್ಟಕ್ಕೆ ಕರೆತಂದು, ಅಲ್ಲಿ ಎಲ್ಲಾ ದೇವರುಗಳಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ರು.

ಕಳೆದ ಎರಡೂ ಮೂರು ವರ್ಷಗಳಿಂದ ಈ ಭಾಗದಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರು ಬತ್ತಿವೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲೆ ಮಳೆ ಕೈಕೊಟ್ಟಿರುವುದರಿಂದ, ಮೇವಿನ ಲಭ್ಯತೆ ಇಲ್ಲದೆ ಕುಟುಂಬ ನಿರ್ವಹಣೆಗೆ ಸಹಾಯವಾಗಿರುವ ಹಸುಗಳನ್ನು ಇಲ್ಲಿನ ಜನರು ಮಾರಾಟ ಮಾಡುತ್ತಿದ್ದಾರೆ.  

ಆರೇಳು ವರ್ಷಗಳ ಕಾಲ  ತಮ್ಮ ಜಮೀನುಗಳಲ್ಲಿ ಲಕ್ಷಾಂತರ ಸಾಲ ಮಾಡಿ ಬೆಳೆಸಿರುವ, ತೋಟಗಾರಿಕೆಯ ಬೆಳೆಗಳಾದ, ಅಡಕೆ, ತೆಂಗು, ಮಾವು, ದಾಳಿಂಬೆ, ಸೇರಿದಂತೆ ಅನೇಕ ಬೆಳೆಗಳು ಬಾಡಿವೆ. ಹೀಗಾಗಿ ಸಾಮೂಹಿಕವಾಗಿ ಹತ್ತಾರು ಗ್ರಾಮಗಳ ಜನರು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ