3 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಗೆ ಏನಾದಳು ಗೊತ್ತಾ?

ಶುಕ್ರವಾರ, 8 ಫೆಬ್ರವರಿ 2019 (16:23 IST)
ಆಕೆಗೆ ಇನ್ನೂ ಆಟವಾಡುವ ವಯಸ್ಸು… ಶಾಲೆಗೆ ಸೇರಿ ಒಂದೆರಡು ವರ್ಷಗಳೂ ಆಗಿದ್ದಿಲ್ಲ… ಮುಗ್ಧ ಬಾಲಕಿಯ ಬಾಳಲ್ಲಿ ಬರಸಿಡಿಲಿನಂತೆ ಬಂದೆರಗಿದ್ದು ಏನು ಗೊತ್ತಾ?...

ಅಕ್ಷರ ಕಲಿಯಬೇಕಿದ್ದ ಅಕ್ಷರಾ ಮರಳಿ ಬಾರದ ಲೋಕಕ್ಕೆ ಹೋಗಿದ್ದಾಳೆ. ಮಾರಕ ಡೆಂಘೀಗೆ ಬಾಲಕಿಯೋರ್ವಳು ಬಲಿಯಾಗಿದ್ದಾಳೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಅಕ್ಷರಾ ಜಗನ್ನಾಥ ಕಲಶೆಟ್ಟಿ(7) ಮೃತ ಬಾಲಕಿಯಾಗಿದ್ದಾಳೆ. ಅಕ್ಷರಾ, ವಾಡಿ ಪಟ್ಟಣದ ಡಿಎವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಳು. ಮೂರು ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ