ಆಹಾರ ಅರಸಿ ಬಂದ ವಿಶೇಷ ಅತಿಥಿಗೆ ಏನಾಯ್ತು?

ಗುರುವಾರ, 25 ಏಪ್ರಿಲ್ 2019 (12:06 IST)
ಕಾಡು ಹಾಗೂ ನದಿಯನ್ನು ಬಿಟ್ಟು ಆಹಾರ ಅರಸುತ್ತ ಮತ್ತೆ ವಿಶೇಷ ಅತಿಥಿ ನಾಡಿನಲ್ಲಿ ಕಾಣಿಸಿಕೊಂಡಿದೆ. 

ಚಿಕ್ಕೋಡಿ ಜಿಲ್ಲೆಯ ಹುಲಗಬಾಳಿ ಗ್ರಾಮದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ ಕೆಲವರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಆಹಾರ ಅರಸಿ ಪವಾರ್ ಎಂಬವರ ತೋಟದಲ್ಲಿ  ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ನದಿ ಬಿಟ್ಟು ಸುಮಾರು ಅರ್ಧ ಕೀಮಿನಷ್ಟು ದೂರ ಬರುತ್ತಿರುವ ಮೊಸಳೆಗಳಿಂದ ನದಿ ತಟದ ಜನರು ಭಯದಲ್ಲಿದ್ದಾರೆ. ಮೊಸಳೆ ಕಾಟಕ್ಕೆ ಬೇಸಸ್ತು ಹೋಗಿರುವ ಹುಲಬಾಳಿ  ಗ್ರಾಮಸ್ಥರು, ಗಾಬರಿಯಲ್ಲಿದ್ದಾರೆ.

ಕಳೆದ ಒಂದು ವಾರದಲ್ಲಿ 4 ನೇ ಮೊಸಳೆ ಸೆರೆಸಿಕ್ಕಿದೆ. ಹುಲಗಬಾಳಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮವಾಗಿದೆ. ಮೊಸಳೆ ಕುರಿತು ಮಾಹಿತಿ ನೀಡಿದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಅಂತ ಗ್ರಾಮಸ್ಥರು ದೂರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ