ತೆಂಗಿನ ಮರ ಏರಿದ ಚಿರತೆ ಮಾಡಿದ್ದೇನು?
ತೆಂಗಿನ ಮರ ಏರಿದ ಚಿರತೆಯನ್ನು ನೋಡಲು ಸುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಆಗಮಿಸಿರುವ ಘಟನೆ ನಡೆದಿದೆ.
ತೆಂಗಿನ ಮರ ಏರಿದ ಚಿರತೆ ಗಮಗ ಸೆಳೆದಿದೆ. ಮಂಡ್ಯದ ಸೋಮನಾಥಪುರದ ಬಳಿ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸೋಮನಾಥಪುರದ ಯೋಗೇಶ್ ಎಂಬುವರ ತೋಟದಲ್ಲಿ ತೆಂಗಿನ ಮರ ಏರಿದ ಚಿರತೆ ಅಲ್ಲೇ ಕುಳಿತಿತ್ತು. 30-35 ಅಡಿ ಎತ್ತರದ ತೆಂಗಿನ ಮರವನ್ನು ಚಿರತೆ ಏರಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದರು ಸುತ್ತಮುತ್ತಲ ಗ್ರಾಮಸ್ಥರು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಚಿರತೆ ಕೆಳಗಿಳಿಸಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಈ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದವು. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಚಿರತೆಮರ ಏರಿದೆ ಎಂದು ಜನರು ಮಾತನಾಡಿಕೊಂಡರು. ಚಿರತೆ ಪ್ರತ್ಯಕ್ಷವಾಗಿದ್ದರಿಂದಾಗಿ ಆತಂಕದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಕಾಲ ಕಳೆಯುವಂತಾಯಿತು.