Indus Water treaty: ಸಿಂಧೂ ನದಿ ಒಪ್ಪಂದ ಎಂದರೇನು, ಇದನ್ನ ಮಾಡಿದವರು ಯಾರು: ಪಾಕಿಸ್ತಾನಕ್ಕೆ ಆಗುವ ನಷ್ಟವೇನು

Krishnaveni K

ಗುರುವಾರ, 24 ಏಪ್ರಿಲ್ 2025 (20:35 IST)
Photo Credit: X
ನವದೆಹಲಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಕೊಂದ ಬಳಿಕ ಪಾಕಿಸ್ತಾನದ ವಿರುದ್ಧ ಆಕ್ರೋಶಗೊಂಡಿರುವ ಭಾರತ 1960 ರ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಪಡಿಸಿ ಪೆಟ್ಟುಕೊಟ್ಟಿದೆ. ಅಷ್ಟಕ್ಕೂ ಏನಿದು ಸಿಂಧೂ ನದಿ ಒಪ್ಪಂದ? ಇದರಿಂದ ಭಾರತಕ್ಕೆ ಆಗುವ ನಷ್ಟವೇನು? ಇಲ್ಲಿದೆ ನೋಡಿ ವಿವರ.

ಸಿಂಧೂ ನದಿ ಒಪ್ಪಂದ ಎಂದರೇನು? ಸಹಿ ಹಾಕಿದ್ದು ಯಾರು?
65 ವರ್ಷಗಳ ಹಿಂದೆ ಜವಹರ್ ಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಧಾನಿಗಳು ಸಹಿ ಹಾಕಿದ ಒಪ್ಪಂದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ. ಅದರಂತೆ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ಹಂಚಿಕೆ ಮಾಡಲು ಭಾರತ ಒಪ್ಪಿ ಸಹಿ ಮಾಡಿತ್ತು. ಟಿಬೆಟ್ ನಿಂದ ಆರಂಭವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ನದಿ ಸಿಂಧೂ ನದಿ. 1948 ರಲ್ಲಿ ಭಾರತ ನೀರು ಹಂಚಿಕೆ ಮಾಡುತ್ತಿಲ್ಲ ಎಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಅದರಂತೆ ವಿಶ್ವಸಂಸ್ಥೆ ಮಾತುಕತೆ ನಡೆಸಿ 1960 ರಲ್ಲಿ ಉಭಯ ದೇಶಗಳ ನಡುವೆ ನೀರು ಹಂಚಿಕೆ ಒಪ್ಪಂದ ಮಾಡಿಸಿತ್ತು.

ಒಪ್ಪಂದದ ಪ್ರಕಾರ ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳು ಭಾರತದ ನಿಯಂತ್ರಣದಲ್ಲಿರುತ್ತದೆ. ಪಶ್ಚಿಮದ ನದಿಗಳಾದ ಸಿಂಧೂ, ಝೇಲಮ್ ಮತ್ತು ಚೇನಾಬ್ ನದಿಗಳ ನೀರು ಪಾಕಿಸ್ತಾನದ ಬಳಕೆಗೆ ಮೀಸಲಾಗಿರುತ್ತದೆ. ಈ ಒಪ್ಪಂದ ಹೆಚ್ಚಿನ ಲಾಭ ಇದುವರೆಗೂ ಪಾಕಿಸ್ತಾನವೇ ಪಡೆಯುತ್ತಿತ್ತು. ಒಟ್ಟು ನೀರು ಹರಿವಿನ ಶೇ.80 ರಷ್ಟು ಪಾಕಿಸ್ತಾನ ಬಳಕೆ ಮಾಡುತ್ತಿದೆ. ಪಾಕಿಸ್ತಾನದ ಬಹುತೇಕ ಪ್ರಾಂತ್ಯಗಳ ಕೃಷಿ, ಕುಡಿಯುವ ನೀರಿಗೆ ಈ ನದಿ ನೀರೇ ಪ್ರಮುಖ ಮೂಲವಾಗಿದೆ. ಈ ಹಿಂದೆ ಯುದ್ಧ, ಪುಲ್ವಾಮ, ಉರಿ ದಾಳಿಯಾದಾಗಲೂ ಪಾಕಿಸ್ತಾನದ ಜೊತೆಗಿನ ಈ ಒಪ್ಪಂದವನ್ನು ಮುರಿದಿರಲಿಲ್ಲ. ಆದರೆ ಈಗ ಮೋದಿ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಈಗ ಕೃಷಿ, ದಿನಬಳಕೆಗೆ ನೀರಿನ ಕೊರತೆ ಎದುರಾಗಲಿದೆ. ಹೀಗಾಗಿಯೇ ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ