ಪೇಜಾವರ ಶ್ರೀ ವಿರೋಧ ಮಾಡುತ್ತಿರೋದು ಏನನ್ನು?

ಬುಧವಾರ, 29 ಆಗಸ್ಟ್ 2018 (20:15 IST)
ಕೇರಳ ಹಾಗೂ ಮಲೆನಾಡಿನಲ್ಲಿ ಈಗಾಗಲೇ ಸಾಕಷ್ಟು ಪ್ರದೇಶ ನಿರಂತರ ಮಳೆಯಿಂದ ಹಾನಿಗೊಳಗಾಗಿದೆ. ಜನಜೀವನ ದುಸ್ತರವಾಗಿದೆ. ಹೀಗಾಗಿ ಯಾವುದೇ ಯೋಜನೆ ಕೈಗೆ ಎತ್ತಿಕೊಳ್ಳುವ ಮುನ್ನ ಕುಲಂಕುಷ ಅರಿವು ಅಗತ್ಯವಾಗಿರಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಎತ್ತಿನ ಹೊಳೆ ಯೋಜನೆಯನ್ನು ಅವಸರದಿಂದ ಎತ್ತಿಕೊಳ್ಳುವುದು ಸರಿಯಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಅವಸರದಿಂದ ಯಾವುದೇ ಯೋಜನೆ ಜಾರಿಗೆ ಬರಬಾರದು ಎಂದಿರುವ ಅವರು, ಕೇರಳ ಹಾಗೂ ಮಲೆನಾಡಿನಲ್ಲಿ ಸಂಭವಿಸಿದ ಅನಾಹುತಗಳಿಂದ ಎಚ್ಚೆತ್ತುಕೊಳ್ಳಬೇಕಿದೆ.

ಯೋಜನೆಯಿಂದಾಗಿ ಬೇರೆ ಯಾರಿಗೂ ತೊಂದರೆಯಾಗಬಾರದು ಎಂಬುದು ತಮ್ಮ ಕಾಳಜಿಯಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ