ಪೊಲೀಸರು ಏನು ಮಾಡುತ್ತಿದ್ದಾರೆ: ರಾಮಲಿಂಗಾರೆಡ್ಡಿ ಗರಂ
ವಿನಯ್ ಕುಲಕರ್ಣಿ ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾದವರ ಮೇಲೆ ಮಾತ್ರ ದೂರು ದಾಖಲಾಗಿದೆ ಇದು ಸರಿಯಲ್ಲ, ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗಿಯಾದವರ ಮೇಲೂ ಕಾನೂನು ಕ್ರಮ ಆಗಲಿ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೋಲೀಸರು ಏನ್ ಮಾಡ್ತಿದ್ದಾರೆ?
ಐಜಿ, ಗೃಹ ಸಚಿವರು ಏನ್ ಮಾಡ್ತಿದ್ದಾರೆ? ಬಂದೂಕು ಹಾರಿಸೋದು ಸಂಪ್ರದಾಯ ಅಂತಾರೆ ಗೃಹ ಸಚಿವರು ಪೋಲೀಸರು ರಾಜೀನಾಮೆ ನೀಡಿ, ಬಿಜೆಪಿ ಸೇರಲಿ ಎಂದು ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಮೋದಿಯವ್ರಿಗೆ ಕಾಳಜಿ ಇಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಜನರಿಗೆ ಏನೂ ಪರಿಹಾರ ಕೊಡ್ಲಿಲ್ಲ ಈ ಸರ್ಕಾರ ಕಿತ್ತೊಗೆಯಬೇಕು ಎಂದು ವಾಗ್ದಾಳಿ ನಡೆಸಿದ್ರು.