ನೀರಾವರಿ ಅನ್ಯಾಯ ಖಂಡಿಸಿ ಪಾದಯಾತ್ರೆ: ಎಚ್.ಡಿ.ದೇವೇಗೌಡ
ನೀರಾವರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ ಹೀಗಾಗಿ ಮೂರು ಭಾಗಗಳಿಂದ ಪಾದಯಾತ್ರೆ ಮಾಡೋ ಮೂಲಕ ಹೋರಾಟ ಮಾಡೋದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದ ಬಳಿಕ ಪಾದಯಾತ್ರೆ ಪ್ರಾರಂಭ ಮಾಡ್ತೀವಿ. ಕುಮಾರಸ್ವಾಮಿ ಅವ್ರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ . ರಾಜ್ಯದ ಹಿತ ಕಾಪಾಡುವುದಕ್ಕೆ ಈ ಹೋರಾಟ ಮಾಡಲಾಗ್ತಿದೆ ಎಂದರು.
ಪ್ರಾದೇಶಿಕ ಪಕ್ಷವಾಗಿ ನಮ್ಮ ಹೋರಾಟ ಮಾಡ್ತೀವಿ. ಬಿಜೆಪಿ ಕಾಂಗ್ರೆಸ್ ಈ ವಿಚಾರದಲ್ಲಿ ಹೋರಾಟ ಮಾಡಲು ಕಷ್ಟ. ಅಧಿಕಾರದಲ್ಲಿ ಇದ್ದರು ಈ ಎರಡು ಪಕ್ಷಗಳು ಏನು ಮಾಡಲು ಆಗಿಲ್ಲ ಅಂತ ಆಕ್ರೋಶ ಹೊರ ಹಾಕಿದ್ರು. ಪಾದಯಾತ್ರೆ ಬಳಿಕೆ ನಮ್ಮ ಪಕ್ಷದಿಂದ ನಿಯೋಗ ತೆರಳಿ ಪ್ರಧಾನಿ ಮೋದಿ ಅವ್ರಿಗೆ ಮನವಿ ಕೊಡೋದಾಗಿ ತಿಳಿಸಿದರು.
ಒಂದು ವೇಳೆ ಸರ್ಕಾರವೇ ಸರ್ವ ಪಕ್ಷ ನಿಯೋಗ ಮೋದಿ ಬಳಿ ಕರೆದುಕೊಂಡು ಹೋದರೆ ನಮ್ಮ ಪಕ್ಷವೂ ಬೆಂಬಲ ಕೊಡಲು ಸಿದ್ದ ಅಂತ ತಿಳಿಸಿದರು.