ಪೊಲೀಸರೇ ಮಾಡಿದ್ರು ಜನಸ್ನೇಹಿ ಮಕ್ಕಳ ಮನೆ

ಭಾನುವಾರ, 15 ಸೆಪ್ಟಂಬರ್ 2019 (18:57 IST)
ಪೊಲೀಸರು ಅಂದ್ರೇನೆ ಭಯ ಪಡುವ ಸಮಾಜದಲ್ಲಿ ಪೊಲೀಸರು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುವ‌ ಮೂಲಕ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಅದರಂತೆಯೇ ಮಕ್ಕಳ ಆಟದ ಮೈದಾನವನ್ನು ನಾವೆಲ್ಲರೂ ಶಾಲೆಯಲ್ಲಿ ನೋಡಿರ್ತೀವಿ. ಪಾರ್ಕ್ ನಲ್ಲಿ ನೋಡಿರ್ತೀವಿ. ಆದ್ರೆ ಪೊಲೀಸ್ ಠಾಣೆಯಲ್ಲಿ ನೋಡಿರಲು ಸಾಧ್ಯವಿಲ್ಲ.

ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಜನರಲ್ಲಿ, ಮಕ್ಕಳಲ್ಲಿ ಭಯದ ವಾತವರಣ ಹೋಗಲಾಡಿಸಲು ಜನಸ್ನೇಹಿಯಾಗಿ ಹಲವು ಸಮಾಜಮುಖಿ  ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪೊಲೀಸರು ಮಾಡಿದ್ರು.

ಈ ಬಗ್ಗೆ  ಜನರಲ್ಲಿರುವ ಭಯವನ್ನು ಹೋಗಲಾಡಿಸಿದ್ದಾರೆ ಪೊಲೀಸರು. ಅದಕ್ಕೆಉದಾಹರಣೆ ಎಂಬಂತೆ ಹೆಚ್ ಎಸ್ ಆರ್ ನ  ಪೊಲೀಸ್ ಠಾಣೆಯಲ್ಲಿ ಮಕ್ಕಳ ಮನೆಯನ್ನು ಉದ್ಘಾಟನೆ ಮಾಡಲಾಯಿತು. ಸುಮಾರು ಜನ ಠಾಣೆಗೆ ಬಂದು ಹೋಗ್ತಾರೆ.

ಅವರೊಂದಿಗೆ ಚಿಕ್ಕ ಮಕ್ಕಳನ್ನು ತರುತ್ತಾರೆ. ಇದು ಒಂದು ರೀತಿ ಮಕ್ಕಳಲ್ಲಿ ಪೊಲೀಸರು ಅಂದ್ರೆ ಭಯದ ವಾತವರಣ ನಿರ್ಮಾಣಮಾಡುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಒಂದು ಆಟ ಆಡುವ ಮನೆ ಮಾಡಿದ್ರೆ ಚೆನ್ನಾಗಿರುತ್ತೆ ಎನ್ನುವ ನಿಟ್ಟಿನಲ್ಲಿ ಹೆಚ್ ಎಸ್ ಆರ್ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಾಗು ಅವರ ತಂಡಕ್ಕೆ ಹೇಳಿದಾಗ ಇಷ್ಟು ಚೆನ್ನಾಗಿ ಮಕ್ಕಳ ಆಟದ ಮನೆ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಡಿಸಿಪಿ ಇಶಾ ಪಂಥ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ