ಪೊಲೀಸರು ಮೊಬೈಲ್ ಕಸಿದಾಗ ಏನು ಮಾಡಬೇಕು ? ಇಲ್ಲಿದೆ ಮಾಹಿತಿ ನೋಡಿ

ಭಾನುವಾರ, 3 ಏಪ್ರಿಲ್ 2022 (20:03 IST)
ಫೆಬ್ರವರಿ 25 ರಂದು ಮಧ್ಯರಾತ್ರಿ 2 ಗಂಟೆಗೆ, 22 ವರ್ಷದ ನಿಖಿಲ್ ಬೆಂಗಳೂರಿನ (Bengaluru) ಹೆಚ್‌ಎಸ್‌ಆರ್ (HSR Layout) ಲೇಔಟ್‌ನಲ್ಲಿ ಆಟೋ ಒಂದನ್ನು ಹತ್ತಿದ್ದಾರೆ. ಐಟಿ (IT) ಉದ್ಯೋಗಿ ನಿಖಿಲ್ ಸ್ನೇಹಿತರೊಂದಿಗೆತೆರಳಿ ಪಾರ್ಟಿ ಮಾಡಿದ್ದ.ಮನೆಗೆ ತೆರಳಲು ಆಟೋ ಹತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆಟೋ ಪರಿಶೀಲನೆಗೆ ಬಂದದಿದ್ದಾರೆ.
 
ನಾನು ಮದ್ಯದ (Liquor) ಅಮಲಿನಲ್ಲಿದ್ದನ್ನು ಗಮನಿಸಿದ ನಂತರ, ಅವರು ನನ್ನ ಬ್ಯಾಗ್ ಅನ್ನು ಪರಿಶೀಲಿಸಿದರು ಮತ್ತು ನನ್ನ ಫೋನ್ ಕೊಡುವಂತೆ ಕೇಳಿದರು. ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಅವರು ಅನೇಕ ಪ್ರಶ್ನೆ ಕೇಳಿದರು. ಆದರೆ ನನಗ ಉತ್ತರ ಕೊಡಲು ಸಾಧ್ಯವಾಗಲಿಲ್ಲ
 
ನಾನು ಯಾವುದೇ ಅಪರಾಧ ಮಾಡದಿದ್ದರೂ, ಪೊಲೀಸರು ನನ್ನ ಫೋನ್ ಅನ್ನು ಹಸ್ತಾಂತರಿಸುವಂತೆ ಕೇಳಿಕೊಂಡರು" "ನಾನು ವಿರೋಧಿಸಿದರೂ ಬಿಡವುವಂತೆ ಕಾಣಲಿಲ್ಲ. ಮೊಬೈಲ್ ಕಸಿದುಕೊಂಡಿದ್ದು ಅಲ್ಲದೆ ಮೊಬೈನ್ ನಲ್ಲಿ 'weed' ಮತ್ತು 'pot' ಎಂಬ ಪದ ಹುಡುಕಿದರು. ಸರ್ಚ್ ರಿಸಲ್ಟ್ ನಲ್ಲಿ ಏನು ಬರದಿದ್ದಾಗ ವಾಪಸ್ ಕೊಟ್ಟರು.
 
ಈ ರೀತಿ ವೈಯಕ್ತಿಕ ಮಾಹಿತಿಯನ್ನು ಬಲವಂತವಾಗಿ ತೆಗೆದುಕೊಳ್ಳುವುದು ಸಂವಿಧಾನ ವಿರೋಧಿ ಎನ್ನುವುದು ನನಗೆ ಗೊತ್ತಿದೆ. ನಾನು ಕಾನೂನು, ವಾರೆಂಟ್ ಎನ್ನುವುದರ ಬಗ್ಗೆ ಮಾತನಾಡುವುದರೊಂಗೆ ಎಲ್ಲವೂ ಆಗಿ ಹೋಗಿತ್ತು. ನಂತರ ನನ್ನನ್ನು ಅಲ್ಲಿಂ ಬಿಟ್ಟು ಕಳುಹಿಸಿದರು.
 
ಟ್ರಾಫಿಕ್ ಪೊಲೀಸರು( Bengaluru Traffic Police) ಸಹ ಡಾಕ್ಯಮೆಂಟ್ ಚೆಕ್ ಮಾಡುವ ಸಂದರ್ಭದಲ್ಲಿ ಮೊಬೈಲ್ ಪಡೆದುಕೊಂಡ ಉದಾಹರಣೆಗಳು ಇರುತ್ತವೆ. ಟ್ರಾಫಿಕ್ ಪೊಲೀಸರು ಮತ್ತು ನಾಗರಿಕರ ನಡುವೆ ವಾಗ್ವಾದ ನಡೆದ ಅನೇಕ ಪ್ರಕರಣಗಳೂ ವರದಿಯಾಗಿದ್ದವು.
 
ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸ್ನೇಹಿತರಿದ್ದಾರೆ. ಎಲ್ಲರಿಗೂ ಒಂದೆಲ್ಲ ಒಂದು ದಿನ ಇಂಥ ಅನುಭವ ಆಗುತ್ತಿದೆ. ನನ್ನನ್ನು ನಿಲ್ಲಕಿಸಿ ಮೊಬೈಲ್ ಚೆಕ್ ಮಾಡಿದ್ದು ಮಾತ್ರ ತುಂಬಾ ವಿಚಿತ್ರ ಅನಿಸಿತು. ನನ್ನ ಸ್ನೇಹಿತರು ಮತ್ತು ಪರಿಚಯಸ್ಥರಿಗೂ ಇದು ಸಂಭವಿಸಿದೆ, "ಎಂದು ಅವರು ಹೇಳಿದರು. "ಆದರೆ ಪೊಲೀಸರು ಆಟೋದಲ್ಲಿ ಪ್ರಯಾಣಿಕರನ್ನು ನಿಲ್ಲಿಸಿದ್ದು ವಿಚಿತ್ರವಾಗಿದೆ ಎಂದಿದ್ದಾರೆ.
 
ಇದೇ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೋಶಿಯಲ್ ಮೀಡಿಯಾ ಮುಖೇನ ಸ್ಫಷ್ಟನೆ ನೀಡಿದ್ದಾರೆ. ಅನುಮತಿ ಇಲ್ಲದೆ ಯಾವ ಪೊಲೀಸ್ ಅಧಿಕಾರಿಯೂ ಮೊಬೈಲ್ ಚೆಕ್ ಮಾಡಬಾರದು.. ಅಂಥ ಘಟನೆ ಕಂಡು ಬಂದರೆ ತಮಗೆ ನೇರವಾಗಿ ತಿಳಿಸಲು ಹೇಳಿದ್ದಾರೆ.
 
ಗನ್ ತೋರಿಸಿ ದರೋಡೆ ಮಾಡಿದ್ದವರ ಸುಳಿವು ನೀಡಿದ ಚೀಟಿ: ಯಶವಂತಪುರ ಸಮೀಪ ಚಿನ್ನದ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಏರ್‌ಗನ್‌ ತೋರಿಸಿ ಬೆದರಿಕೆ ಹಾಕಿ ಆಭರಣ ದೋಚಿದ್ದ ಮೂವರು ಕಿಡಿಗೇಡಿಗಳು, ಕೃತ್ಯ ಎಸಗಿ ಪರಾರಿಯಾಗುವ ವೇಳೆ ತಾವು ಬೀಳಿಸಿಕೊಂಡು ಹೋಗಿದ್ದ 'ಚೀಟಿ'ಯಿಂದ ಪೊಲೀಸರ ಬಲೆಗೆ ಬಿದ್ದಿದ್ದಾನೆ.
 
ರಾಜಸ್ಥಾನ ರಾಜ್ಯದ ಜಲೂರು ಜಿಲ್ಲೆಯ ಮನೋಹರ್‌ ಸಿಂಗ್‌, ಆತನ ಸಹಚರರಾದ ರಮೇಶ್‌ ಹಾಗೂ ಅಮಿತ್‌ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ಪಿಸ್ತೂಲ್‌ ಹಾಗೂ ಆಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಯಶವಂತಪುರ ಮೊದಲ ರಸ್ತೆಯ ನಿವಾಸಿ ಕಮಲ್‌ ಸಿಂಗ್‌ ಮನೆಗೆ ನುಗ್ಗಿ ದರೋಡೆ ಎಸಗಿ ಪರಾರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ