ನೆಲ,ಜಲ ಭಾಷೆ ವಿಷಯಕ್ಕೆ ಬಂದ್ರೆ ನಾವು ಸುಮ್ಮನಿರಲ್ಲ- ಮಹೇಶ್ ಕುಮಟಳ್ಳಿ

ಭಾನುವಾರ, 4 ಡಿಸೆಂಬರ್ 2022 (18:45 IST)
ಗಡಿ ವಿವಾದ ಸಂದರ್ಭದಲ್ಲಿ ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು ಆಗಮಿಸುತ್ತಿರುವ ವಿಚಾರವಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯಿಸಿದ್ದು,ಭಾಷಾವಾರು ಪ್ರಾಂತ್ಯಗಳಾಧರಿಸಿ ರಾಜ್ಯಗಳನ್ನು ರಚಿಸಲಾಗಿದೆ.ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಗಡಿ ವಿವಾದ ಕೇಳಿ ಬರುತ್ತೆ.ಗಡಿ ವಿಚಾರದಲ್ಲಿ ಏನೇನೋ ಆಗ್ತಿದೆ.ನಮ್ಮ ರಾಜ್ಯದಲ್ಲಿ ಇರೋರೆಲ್ಲ ಕನ್ನಡಿಗರು.ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರದಲ್ಲೂ ಕನ್ನಡಿಗರಿದ್ದಾರೆ.ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಬೇಕು ಅನ್ನೋ ಅವರ ಬೇಡಿಕೆ ರಾಜಕೀಯ ಉದ್ದೇಶದ್ದು,ಅದು ಯಾವತ್ತೂ ಸಾಧ್ಯವಿಲ್ಲ ಎಂದು ಹೇಳಿದ್ರು.
 
ಇನ್ನೂ ಮಹಾರಾಷ್ಟ್ರದವರು ವಿಚಾರ ಮಾಡಿ ಮಾತಾಡಬೇಕು.ಮಹಾರಾಷ್ಟ್ರ ಸಚಿವರು‌ ಯಾವ ಉದ್ದೇಶಕ್ಕೆ ಬರ್ತಿದಾರೋ ಗೊತ್ತಿಲ್ಲ.ಚುನಾವಣೆ ಬರ್ತಿದೆ ಈಗ ಅದಕ್ಕೆ ಬರ್ತಿರಬಹುದು ಆದ್ರೆ ನೆಲ ಜಲ ಗಡಿ ಭಾಷೆ ವಿಚಾರ ಬಂದಾಗ ನಾವು ಸುಮ್ನಿರಲ್ಲ, ನಾವೆಲ್ಲ ಒಂದು ಎಂದು ಮಹೇಶ್ ಕುಮಟಳ್ಳಿ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ