ರಾಜ್ಯ ಬಿಜೆಪಿ ಸರಕಾರ ಪತನಕ್ಕೆ ಕಾರಣ ಯಾರು?
ರಾಜ್ಯ ಬಿಜೆಪಿ ಸರಕಾರ ಪತನವಾಗುತ್ತಿದೆಯಾ? ಇಂಥದ್ದೊಂದು ಅನುಮಾನಕ್ಕೆ ಕಾರಣವಾಗುವ ಹೇಳಿಕೆಯನ್ನು ಮಾಜಿ ಸಿಎಂ ನೀಡಿದ್ದಾರೆ.
ದೇಶ ಹಾಗೂ ರಾಜ್ಯದಲ್ಲಿ ಪ್ರಸ್ತುತ ಆರ್ಥಿಕತೆ ದಿವಾಳಿಯಾಗಿದೆ. ಬೊಕ್ಕಸದಲ್ಲಿ ಸಂಬಳ ನೀಡಲು ದುಡ್ಡಿಲ್ಲ. ಇದು ರಾಜ್ಯದ ಪರಿಸ್ಥಿತಿ ಅಲ್ಲ. ಇಡೀ ದೇಶದ ಪರಿಸ್ಥಿತಿ. ಕೇಂದ್ರ ಸಂಖ್ಯಾ ಇಲಾಖೆ ಹೇಳಿದಂತೆ ಜಿಡಿಪಿ 6.7ರಷ್ಟು ಹೆಚ್ಚಾಗಬೇಕಿತ್ತು.
ಆದರೆ ಕೇವಲ ಶೇ 4.7ರಷ್ಟು ಹೆಚ್ಚಾಗಬೇಕಿದೆ. ಇದು ಹೀಗೆ ಮುಂದುವರಿದರೆ ಋಣಾತ್ಮಕ ಪ್ರಗತಿ ಕಾಣಲಿದೆ. ಇದೇ ಮೋದಿ ಸಾಧನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.