ಕರ್ನಾಟಕ ಬಿಜೆಪಿ ಪಡೆಯ ನಾಯಕತ್ವ ಯಾರಿಗೆ ವಲಿಯಲಿದೆ ಎಂಬ ದೊಡ್ಡ ಪ್ರಶ್ನೆಗೆ ಉತ್ತ್ರ ಇನ್ನೂ ನಿಗೂಢವಾಗಿಯೇ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರಲು ನಾಯಕರು ಪೈಪೋಟಿ ನಡೆಸುತ್ತಿದ್ದು, ರಾಜ್ಯದಲ್ಲಿ ಕೇಸರಿ ಪಡೆ ಮುನ್ನಡೆಸಲು ಹಲವು ನಾಯಕರು ಆಸಕ್ತಿ ತೋರಿದ್ದಾರೆ. ಅಧ್ಯಕ್ಷ ಪಟ್ಟವನ್ನ ನನಗೆ ಕೊಡಿ ಎಂದು ಮಾಜಿ ಸಚಿವ ಆರ್.ಅಶೋಕ್ ವರಿಷ್ಠರಿಗೆ ಮನವಿ ಮಾಡಿದ್ದು, ನನಗೂ ಅಧ್ಯಕ್ಷ ಸ್ಥಾನ ಬೇಕೆಂದು ವಿ.ಸೋಮಣ್ಣ ಬಹಿರಂಗವಾಗಿಯೇ ಕೇಳಿದ್ದಾರೆ. ಮತ್ತೊಂದು ಕಡೆ ಮಾಜಿ ಸಚಿವ ಸುನೀಲ್ ಕುಮಾರ್ ಕೂಡ ಪರೋಕ್ಷವಾಗಿ ನಾಯಕತ್ವ ವಹಿಸಿಕೊಳ್ಳಲು ನಾನು ಸಿದ್ಧವೆಂದಿದ್ದಾರೆ. ಇವರ ನಡುವೆ ಪಕ್ಷ ಏನೇ ಸ್ಥಾನ ಕೊಟ್ರೆ ನಿಭಾಯಿಸ್ತೀನಿ ಎಂದು ಯತ್ನಾಳ್ ಸಹ ಹೇಳಿದ್ದಾರೆ. ಈಗಾಗಲೇ ಕಟೀಲು ಅವಧಿ ಮುಗಿದಿದ್ದು ಚುನಾವಣೆ ಇದ್ದಿದ್ರಿಂದ ಅವರನ್ನೇ ಮುಂದುವರೆಸಲಾಗಿತ್ತು. ಆದ್ರೆ ಚುನಾವಣೆಯಲ್ಲಿ ಆದ ಸೋಲಿನಿಂದ ಕಟೀಲ್ರನ್ನ ಬದಲಾಯಿಸಬೇಕೆಂದು ಸಾಕಷ್ಟು ನಾಯಕರು ಒತ್ತಾಯಿಸಿದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಕಟೀಲ್ರನ್ನ ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಮುಂದಿನ ಬಿಜೆಪಿಯ ರಾಜ್ಯಾಧ್ಯಕ್ಷ ಯಾರೆಂದು ತೀವ್ರ ಕುತೂಹಲ ಕೆರಳಸಿದೆ.