Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

Krishnaveni K

ಗುರುವಾರ, 17 ಏಪ್ರಿಲ್ 2025 (20:37 IST)
ಬೆಂಗಳೂರು: ಜಾತಿಗಣತಿ ವಿಚಾರದಲ್ಲಿ ಯಾವುದೇ ವಿವಾದ ಮೈಮೇಲೆಳೆದುಕೊಳ್ಳದಂತೆ ಎಚ್ಚರಿಕೆಯ ನಡೆ ಇಡಲು ಸಚಿವ ಸಂಪುಟದಲ್ಲಿ ಇಂದು ತೀರ್ಮಾನ ಮಾಡಲಾಗಿದೆ.

ಇಂದು ಜಾತಿಗಣತಿ ವರದಿ ಜಾರಿಗೆ ತರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕಿತ್ತು. ಆದರೆ ಸಚಿವರ ವಿರೋಧ ಸಿಎಂ ಸಿದ್ದರಾಮಯ್ಯನವರು ಖಚಿತ ನಿರ್ಧಾರಕ್ಕೆ ಬಾರದಂತೆ ತಡೆದಿದೆ ಎನ್ನಲಾಗಿದೆ.

ಜಾತಿಗಣತಿ ಮಾಡುವುದಕ್ಕೆ ಕಾಂಗ್ರೆಸ್ ನಾಯಕರಲ್ಲಿ ವಿರೋಧವಿಲ್ಲ. ಆದರೆ ಈಗ ಸಲ್ಲಿಕೆಯಾಗಿರುವ ವರದಿ ಹಳೆಯದಾಗಿದ್ದು, ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಈ ವರದಿ ಜಾರಿಗೆ ತಂದರೆ ಜನರ ಮತ್ತು ತಮ್ಮ ಸಮುದಾಯದವರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಭಯ ಸಚಿವರಲ್ಲಿದೆ.

ಈ ಕಾರಣಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ಸಿಎಂ ಎಲ್ಲಾ ಸಚಿವರ ಅಭಿಪ್ರಾಯ ಕೇಳಿದಾಗ ಸದ್ಯಕ್ಕೆ ವರದಿ ಜಾರಿ ಬೇಡ ಎಂಬ ಅಭಿಪ್ರಾಯ ಕೇಳಿಬಂದಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆ ವೇಳೆ ಎಲ್ಲರೂ ಮೌಖಿಕ ಅಥವಾ ಲಿಖಿತ ರೂಪದಲ್ಲಿ ಅಭಿಪ್ರಾಯ ತಿಳಿಸಲು ಹೇಳಿದ್ದಾರೆ ಎಂದಿದ್ದಾರೆ. ಹೀಗಾಗಿ ಇಂದೇ ಜಾತಿಗಣತಿ ವರದಿ ಬಗ್ಗೆ ಸರ್ಕಾರ ಇಂದೇ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದಿದ್ದವರಿಗೆ ನಿರಾಸೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ