ಬ್ಯಾರಿಕೇಡ್ ಯಾಕೆ ಹಾಕಿಲ್ಲ? : ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್
ಅಂಡರ್ ಪಾಸ್ ದುರಂತ ಸಂಬಂಧ ಸಿಎಂ ಅವರು ತಮ್ಮ ನಿವಾಸಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕರೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಆಯುಕ್ತರಿಂದ ಮಾಹಿತಿ ಪಡೆದಿದ್ದಾರೆ. ಮಳೆ ಅವಾಂತರ ಎಲ್ಲೆಲ್ಲಿ ಆಗಿದೆ ಅಲ್ಲಿ ಅಧಿಕಾರಿಗಳು ಕೂಡಲೇ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಸಿಎಂ ಸೂಚಿಸಿದರು.