ಎಲೆಕ್ಷನ್‌ಗೆ ಭರ್ಜರಿ ತಾಲೀಮು ನಡೆಸಿದ್ದಾರಾ ಜಾಗತಿಕ ನಾಯಕರು..?

geetha

ಶನಿವಾರ, 10 ಫೆಬ್ರವರಿ 2024 (17:00 IST)
ನವದೆಹಲಿ-ಈ ವರ್ಷ ಜಾಗತಿಕ ಮಟ್ಟದಲ್ಲಿ ಒಂದಷ್ಟು ದೇಶಗಳು ಚುನಾವಣೆಯನ್ನು ಎದುರಿಸುತ್ತಿವೆ. ಹಾಗೆ ನೋಡಿದರೇ ಅದೇ ಸಾಲಿನಲ್ಲಿ ನಮ್ಮ ಭಾರತವೂ ಕೂಡ ಸೇರಿಕೊಂಡಿದೆ. ಇದಲ್ಲದೇ ವಿಶ್ವದ ದೊಡ್ಡಣ್ಣನ ನೆಲದಲ್ಲಿಯೂ ಕೂಡ ಇದೇ ವರ್ಷ ನವಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆ ಕಡೆ ರಷ್ಯಾದಲ್ಲಿ ಕೂಡ ಮಾರ್ಚ್ನಲ್ಲಿ ಚುನಾವಣಾ ಅಖಾಡ ಸಿದ್ಧವಾಗುತ್ತಿದೆ.ಅಲ್ಲಿಗೆ ಒಂದಷ್ಟು ಸ್ಪಷ್ಟವಾಗಿದೆ. ಇದೇ ವರ್ಷದಲ್ಲಿ ಜಗತ್ತಿನ ಬಲಾಢ್ಯ ದೇಶಗಳಲ್ಲಿ ಚುನಾವಣಾ ಕಣ ರಂಗೇರೋದು ಪಕ್ಕಾ ಆಗಿ ಬಿಟ್ಟಿದೆ.ಬೈಡೆನ್ ವಿರುದ್ಧ ಡೊನಾಲ್ಡ್ ಟ್ರಂಪ್ ಎಲೆಕ್ಷನ್‌ನಲ್ಲಿ ತೊಡೆ ತಟ್ಟಲು ಈಗಿನಿಂದಲೇ ಸಕಲ ರೀತಿಯಲ್ಲಿಯೂ ತಯಾರಿಯನ್ನು ನಡೆಸಿದ್ದಾರೆ.

ಇನ್ನೂ ಸೋವಿಯತ್ ರಷ್ಯಾದಲ್ಲಿ ಪುಟಿನ್ ಈ ಭಾರಿಯೂ ಚುನಾವಣೆಗೆಗೆ ಸನ್ನದ್ದರಾಗುತ್ತಿದ್ದಾರೆ.ಮತ್ತೆ ರಷ್ಯಾದ ಅಧ್ಯಕ್ಷರಾಗೊದಕ್ಕೆ ಭರ್ಜರಿ ತಾಲೀಮುನ್ನು ನಡೆಸಿದ್ದಾರೆ.. ಆದರೂ ಪುಟಿನ್‌ಗೆ ಚುನಾವಣೆಯನ್ನು ಎದುರಿಸಲು ಅದೊಂದು ಭಯ ಬಿಟ್ಟು ಬಿಡದೇ ಕಾಡುತ್ತಿದೆ.ರಷ್ಯಾಧಿಪತಿಗೆ ಮಾರ್ಚ್ನಲ್ಲಿ ಎದುರಾಗುತ್ತಿರುವ ಎಲೆಕ್ಷನ್‌ನಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಮೇಲುಗೈ ಸಾಧಿಸಲು ಪರದಾಡುತ್ತಿರೋದೇ ದೊಡ್ಡ ಸಮಸ್ಯೆಯಾಗಿ ಕಾಡ್ತಿದೆ. ಬಲಾಢ್ಯ ದೇಶವಾಗಿರುವ ರಷ್ಯಾ, ಅದು ಪುಟಿನ್‌ನ ಅವಧಿಯಲ್ಲಿ ಹಿನ್ನಡೆಯನ್ನು ಕಾಣ್ತಾ ಇರೋದು ಮುಂದಿನ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು.

ಅದೇ ರೀತಿಯಾಗಿ ಭಾರತದಲ್ಲಿ ಲೋಕಸಭಾ ಎಲೆಕ್ಷನ್ ಬರ್ತಾ ಇದೆ.ಮೂರನೇ ಬಾರಿಗೆ ಗೆದ್ದು, ಹ್ಯಾಟ್ರಿಕ್ ಸಾಧನೆಯನ್ನು ಮಾಡಲು ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ.ಸಮೀಕ್ಷೆಗಳ ಲೆಕ್ಕಾಚಾರವನ್ನು ನೋಡಿದರೆ ಮತ್ತೇ ಮೋದಿಯೆ ಮೂರನೇ ಅವಧಿಗೆ ಭಾರತದ ಪ್ರಧಾನಿ ಆಗ್ತಾರೆ ಅನ್ನೋದು ಪಕ್ಕಾ ಎನ್ನಲಾಗ್ತಿದೆ.ದೊಡ್ಡಣ್ಣನ ನೆಲದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಭಾರೀ ಹಲವು ಮಂದಿ ಪ್ರಬಲ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ದತೆಯನ್ನು ನಡೆಸಿದ್ದಾರೆ.ಬೈಡೆನ್ ಕೂಡ ಮತ್ತೆ ಇನ್ನೊಂದು ಅವಧಿಗೂ ಅಮೆರಿಕಾ ಅಧ್ಯಕ್ಷರಾಗಲು ಭರ್ಜರಿ ತಯಾರಿ ನಡೆಸಿದ್ದಾರೆ. ಆದರೆ ಇದೇ ಬೈಡೆನ್‌ಗೆ ಪ್ರಬಲ ಪೈಪೋಟಿಯನ್ನು ನೀಡಲು ಹಿಂದಿನ ಅಮೆರಿಕಾದ ಅಧ್ಯಕ್ಷರಾಗಿದ್ದ ಟ್ರಂಪ್ ಅಖಾಡ ಸಿದ್ಧ ಮಾಡುತ್ತಿದ್ದಾರೆ..?ಅದೇ ರೀತಿಯಾಗಿ ರಷ್ಯಾದಲ್ಲಿಯೂ ಕೂಡ ಪುಟಿನ್‌ಗೆ ಸೆಡ್ಡು ಹೊಡೆಯಲು ಒಂದಷ್ಟು ಮಂದಿ ನಾಯಕರು ಎಲೆಕ್ಷನ್ ಗೆಲ್ಲುವ ತಾಲೀಮು ನಡೆಸುತ್ತಿದ್ದಾರೆ.

ಆದರೂ ಪುಟಿನ್‌ನನ್ನು ಸೋಲಿಸೋದು ಅಷ್ಟು ಸುಲಭವಿಲ್ಲ... ಬಟ್ ಎಲೆಕ್ಷನ್ ಅಂದ ಮೇಲೆ ಸೋಲು ಗೆಲುವು ಮಮೂಲಿ, ಫೈನಲಿ ಏನಾಗುತ್ತೋ ಬಲ್ಲರ‍್ಯಾರು...?ತೈವಾನ್ನಲ್ಲಿ ಈ ವರ್ಷದ ಆರಂಭದಲ್ಲೇ ಚುನಾವಣಾ ಮುಗಿದು ಫಲಿತಾಂಶವೂ ಕೂಡ ಹೊರ ಬಿದ್ದಾಗಿದೆ.. ಯುರೋಪ್‌ನ ಹಲವು ಕಡೆ ಈ ವರ್ಷವೇ ನಡೆದು ಹೋಗಲಿದೆ ಎಲೆಕ್ಷನ್.ಪೋರ್ಚುಗಲ್‌ನಲ್ಲಿ ಮಾರ್ಚ್ನಲ್ಲಿ ಚುನಾವಣೆ ಎದುರಾಗ್ತಿದೆ. ಮತ್ತೊಂದೆಡೆ ಜೂನ್ ೯ಕ್ಕೆ ಬೆಚ್ಜಿಯಂನಲ್ಲಿ ಚುನಾವಣೆ ನಡೆಯುತ್ತಿದೆ. ಮೆಕ್ಸಿಕೋದಲ್ಲಿ ಜೂನ್೨ರಂದು ಅಧ್ಯಕ್ಷಿಯ ಚುನಾವಣೆಗೆ ಈಗಿನಿಂದಲೇ ಅಖಾಡ ರಂಗೇರುತ್ತಿದೆ. ಈ ಕಡೆ ವೆನಿಜುಲಾದಲ್ಲಿ ಇನ್ನೂ ಎಲೆಕ್ಷನ್ ಡೇಟ್ ಫಿಕ್ಸ್ ಆಗಿಲ್ಲ. ಆದರೂ ಈ ವರ್ಷವೇ ಇಲ್ಲಿ ಎಲೆಕ್ಷನ್ ನಡೆಯೋದು ಬಹುತೇಕ ನಿಕಿ ಎನ್ನಲಾಗ್ತಿದೆ.

ಇದೇ ವರ್ಷ ಬಲಾಡ್ಯ ದೇಶಗಳಲ್ಲಿ ಯಾರು ಅಧಿಪತಿ ಆಗುತ್ತಾರೆ ಎಂಬುದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಮೆರಿಕಾ, ರಷ್ಯಾ, ಭಾರತ ಸೇರಿದಂತೆ ಹಲವು ರಾಷ್ಟçಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲೂ ಅಮೆರಿಕಾದ ಹಾಲಿ ಅಧ್ಯಕ್ಷರಾಗಿರುವ ಬೈಡನ್ ಅಂತೂ ಮತ್ತೆಯೂ ಅಂದ್ರೆ, ೨೦೨೪ರ ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯಲ್ಲಿ ಮೋಡಿ ಮಾಡಲು ಕಾತುರರಾಗಿದ್ದಾರೆ.ಅಮೆರಿಕಾದಲ್ಲಿ ಈ ವರ್ಷವೇ ನೂತನ ಅಧ್ಯಕ್ಷರನ್ನು ನೇಮಿಸುವ ಚುನಾವಣೆ ನಡೆಯಲಿದೆ ಸಾಕಷ್ಟು ಮಂದಿ ಅಭ್ಯರ್ಥಿಗಳು ದೊಡ್ಡಣ್ಣನ ನೆಲದಲ್ಲಿ ಎಲೆಕ್ಷನ್‌ನ್ನು ಎದುರಿಸಲು ಅಕ್ಷರಶಃ ತೊಡೆ ತಟ್ಟಿ ನಿಂತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ