ಅವಧಿಗೂ ಮುನ್ನವೇ ಶಾಲೆಗಳಿಗೆ ಚಳಿಗಾಲದ ರಜೆ ಘೋಷಣೆ
ಒಂದು ವಾರದಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ದೆಹಲಿ ಸರ್ಕಾರವು ಶಾಲೆಗಳಿಗೆ ನವೆಂಬರ್ 9 ರಿಂದ 18 ರವರೆಗೆ ರಜೆಯನ್ನು ಘೋಷಿಸಿದೆ.
ಪ್ರತಿ ವರ್ಷವೂ ಡಿಸೆಂಬರ್ನಲ್ಲಿ ತುಂಬಾ ಚಳಿ ಇರುವ ಕಾರಣ ಒಂದು ವಾರಗಳ ಕಾಲ ಚಳಿಗಾಲದ ರಜೆ ನೀಡಲಾಗುತ್ತಿತ್ತು. ಆದರೆ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿರುವ ಕಾರಣ ನವೆಂಬರ್ 9-18 ರವರೆಗೆ ಮುಂಚಿತವಾಗಿ ರಜೆ ಘೋಷಿಸಲಾಗಿದೆ.