ಜಿಮ್‌ನಲ್ಲಿ ಕಸರತ್ತು ಮಾಡುವ ವೇಳೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕುಸಿದುಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಆತಂಕಕಾರಿ ಘಟನೆ ಬೆಂಗಳೂರಿನ ಮಲ್ಲೇಶಪಾಳ್ಯದ ಜಿಮ್‌ನಲ್ಲಿ ನಡೆದಿದೆ. ಜಿಮ್ ವರ್ಕೌಟ್ ಮಾಡುವಾಗ (Gym workout) ಕುಸಿದು ಬಿದ್ದಿದ್ದ ವಿನಯ ಕುಮಾರಿ ಎಂಬ 44 ವರ್ಷದ ಮಹಿಳೆ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ (Baiyappanahalli).
Golden Hour ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಹಾರಿಹೋದ ಪ್ರಾಣಪಕ್ಷಿ!
ವಿನಯಕುಮಾರಿ ಅವಿವಾಹಿತರು. ಜಿಮ್ ಡ್ಯಾನ್ಸ್ ಹವ್ಯಾಸವಾಗಿ ಮಾಡ್ಕೊಂಡಿದ್ದರು. ವಿನಯಕುಮಾರಿ ಅವರ ಮೃತದೇಹ ಸಿ.ವಿ. ರಾಮನ್ ನಗರ ಆಸ್ಪತ್ರೆಯಲ್ಲಿದೆ. ಘಟನೆಯ ಸಿಸಿಟಿವಿ ದೃಶ್ಯ ಟಿವಿ9 ಗೆ ಲಭ್ಯವಾಗಿದ್ದು, ಅದರಲ್ಲಿ ವಿನಯ ಕುಮಾರಿ ಬಾರ್ ಮಾಡುತ್ತ ಮಾಡುತ್ತಲೇ ಕುಸಿದುಬೀಳುವ ಆಘಾತಕಾರಿ ದೃಶ್ಯ ಸಾದ್ಯಂತವಾಗಿ ಸೆರೆಯಾಗಿದೆ.
ಆಘಾತಕಾರಿಯೆಂದರೆ ವಿನಯ ಕುಮಾರಿ ಎಂದಿನಂತೆ ಸಾಮಾನ್ಯವಾಗಿ ಜಿಮ್ ಬಾರ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಅರಿವಿಗೂ ಬಾರದಂತೆ ಹಿಂದಕ್ಕೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜಿಮ್ನಲ್ಲಿದ್ದವರೆಲ್ಲಾ ಬಂದು ಅವರಿಗೆ ಆರೈಕೆ ಮಾಡಿದ್ದಾರೆ. ಮತ್ತು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಲ್ಲಿ ಗೋಲಗ್ಡನ್ ಅವರ್ ಎಂಬ ಅಮೂಲ್ಯ ಕ್ಷಣವೂ ಇಲ್ಲದಂತೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ.