ಹಿಂದುಗಳ ಪರ ಕೆಲ್ಸ ಮಾಡಿ, ಮುಸ್ಲಿಂ ಪರವಲ್ಲ: ಬಸವನಗೌಡ ಯಾತ್ನಾಳ್

ಬುಧವಾರ, 6 ಜೂನ್ 2018 (17:06 IST)
ವಿಜಯಪುರ: ನಾನು ಕಾರ್ಪೋರೆಟ್ ಗಳಿಗೆ ಸೂಚನೆ ನೀಡಿದ್ದೇನೆ. ನೀವು ಹಿಂದುಗಳ ಪರವಾಗಿ ಕೆಲಸ ಮಾಡಬೇಕು ಮುಸ್ಲಿಮರ ಪರವಾಗಿ ಅಲ್ಲ.ನನಗೆ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿದವರು ಹಿಂದುಗಳು ಮುಸ್ಲೀಂಮರಲ್ಲ ಎನ್ನುವ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯಾತ್ನಾಳ ಹೇಳಿಕೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.
ನಾನು ಚುನಾವಣೆಗೂ ಮುಂಚೆ ಕೂಡಾ ಮುಸ್ಲಿಮರು ನನಗೆ ಮತ ಹಾಕುವದು ಬೇಡಾ ಎಂದು ಹೇಳಿದ್ದೇನೆ. ನನ್ನ ಕಚೇರಿ ಸುತ್ತ ಮುತ್ತ ಕೂಡಾ ಟೋಪಿ ಹಾಕಿದವರು, ಗಡ್ಡ ಬಿಟ್ಟವರು ಬರದಂತೆ ನೋಡಿಕೊಳ್ಳಿ ಎಂದು ನಾನು ಕಾರ್ಯಕರ್ತರಿಗೆ ತಿಳಿಸಿದ್ದೆ ಎಂದರು.
 
ಇಲೆಕ್ಷನ್ ‌ಮುಗಿಯುವ ವರೆಗೂ ಅವರ ಮುಖವೂ ನೋಡುವದು ಬೇಡಾ ಎಂದು ಹೇಳಿದ್ದೆ. ಎಲೆಕ್ಷನ್ ನಲ್ಲಿ ನಾನು ಸೋಲುತ್ತೇನೆ ಎಂದು ಕೆಲ ಹಿಂದುಗಳು ಮುಸ್ಲಿಂ ಜೊತೆ ಗುರುತಿಸಿಕೊಂಡಿದ್ದರು.ಮತ ಎಣಿಕೆ ಕೇಂದ್ರಕ್ಕೂ ಬಂದಿದ್ದರು. ಆದರೆ ನಾನು ಗೆದ್ದ ಬಳಿಕ ನಾವು ನಿಮ್ಮ ಪರವಾಗಿ ಬಂದಿದ್ದೇವೆ ಎಂದರು.
 
ಇನ್ನು ಮುಂದೆ ಹಿಂದು ವ್ಯಾಪಾರಸ್ಥರಿಗೆ, ಮಹಿಳೆಯರಿಗೆ ತೊಂದರೆ ಕೊಟ್ಟರೆ ನಡೆಯಲ್ಲ.ಈಗಾಗಲೇ ಟ್ರಾಫಿಕ್ ಪೋಲಿಸರಿಗೂ ಮಾಹಿತಿ ನೀಡಿದ್ದೇನೆ.ಎಲ್ಲಿ ಬಾಳೆ ಹಣ್ಣಿನ ಗಾಡಿ ಇರತ್ತೊ ಅಲ್ಲಿ ನಿಮ್ಮದು ಒಂದು ವಾಹನ ಇರಬೇಕು ಎಂದು ತಿಳಿಸಿದ್ದೇನೆ. ಕಳೆದ ಐದು ವರ್ಷಗಳ ಆಡಳಿತದಲ್ಲಿ ಹಿಂದೂ ವ್ಯಾಪಾರಸ್ಥರು ರೋಸಿ ಹೋಗಿದ್ದಾರೆ ಎಂದು ಬಿಜೆಪಿ ಮುಖಂಡ ಯಾತ್ನಾಳ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ