ಹಾವೇರಿಯಲ್ಲಿ ವಿಶ್ವ ಸೊಳ್ಳೆ ನಿವಾರಣೆ ದಿನಾಚರಣೆ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ ಹಾಗೂ ಹಾವೇರಿ ತಾಲ್ಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸಹಯೋಗದಲ್ಲಿಈ ಆಚರಣೆ ನಡೆಯಿತು.
ಸೊಳ್ಳೆಗಳ ಉತ್ಪಾದನೆ ತಡೆಯಲು ಸಮುದಾಯದಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಹೀಗಂತ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಪ್ರಭಾಕರ ಕುಂದೂರ ಹೇಳಿದರು.
ಸುತ್ತಮುತ್ತಲಿನ ಪರಿಸರ ಸ್ಚಚ್ಛವಾಗಿರಿಸಿಕೊಳ್ಳುವುದರ ಮೂಲಕ ಡೆಂಗ್ಯೂ, ಚಿಕುನ್‍ಗುನ್ಯಾ, ಮಲೇರಿಯಾ, ಫೈಲೇರಿಯಾ, ಮೆದುಳು ಜ್ವರ ರೋಗವನ್ನು ನಿಯಂತ್ರಿಸಬಹುದು ಎಂದರು.