ಯಡಿಯೂರಪ್ಪ ನಿತ್ಯ ಕನಸು ಕಾಣ್ತಿದ್ದಾರೆ; ಒಬ್ಬ ಶಾಸಕ ಅವ್ರ ಕೈಗೆ ಸಿಗಲ್ಲ
ಯಡಿಯೂರಪ್ಪ ಸರ್ಕಾರ ರಚನೆ ಮಾಡ್ತೀವಿ ಅಂತಾ ಹೇಳ್ತಾನೇ ಇದಾರೆ. ಪ್ರತಿದಿನ ಕನಸು ಕಾಣ್ತಿದಾರೆ. ಆದರೆ ನಮ್ಮ ಒಬ್ಬ ಶಾಸಕ ಅವರ ಕೈಗೆ ಸಿಗಲ್ಲ. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನಮ್ಮ ಒಬ್ಬ ಶಾಸಕ ಈಗಾಗಲೇ ಹೋಗಿ ಆಗಿದೆ. ಮತ್ತೆ ಯಾರೂ ಹೋಗುವುದಿಲ್ಲ. ನಾವು ಯಾವ ಬಿಜೆಪಿ ಶಾಸಕರನ್ನೂ ಸಂಪರ್ಕಿಸಿಲ್ಲ ಎಂದರು.
ಆದರೆ ಬಿಜೆಪಿಯವರು ನಮ್ಮ ಶಾಸಕರನ್ನು ಸಂಪರ್ಕ ಮಾಡಿದ್ದಕ್ಕೆ ನಮ್ಮ ಬಳಿ ಪುರಾವೆ ಇದೆ ಎಂದು ಹೇಳಿದ್ರು.
ಬಿ.ಎಸ್.ಯಡಿಯೂರಪ್ಪ ಗುತ್ತಿಗೆದಾರರು, ಅಧಿಕಾರಿಗಳನ್ನು ಸಂಪರ್ಕಿಸಿ ನಮ್ಮ ಸರ್ಕಾರ ಬರುತ್ತೆ ಅಂತಾ ಆಮಿಷ ಒಡ್ಡುತ್ತಿದ್ದಾರೆ ಅಂತ ಸಚಿವ ಡಿ.ಕೆ.ಶಿವಕುಮಾರ ಟೀಕೆ ಮಾಡಿದ್ರು.