ಹೆಚ್ 1 ಎನ್ 1 ಗೆ ಯುವಕ ಬಲಿ

ಭಾನುವಾರ, 18 ನವೆಂಬರ್ 2018 (14:03 IST)
ರಾಜ್ಯಕ್ಕೆ ಮತ್ತೆ H1 N1 ಮಹಾಮಾರಿ ಕಾಲಿಟ್ಟಿದೆ. ಮಾರಕ ರೋಗಕ್ಕೆ ಯುವಕನೊಬ್ಬ ಬಲಿಯಾದ ಘಟನೆ ನಡೆದಿದೆ.

H1 N1 ಮಹಾಮಾರಿಗೆ ವಿಜಯಪುರ ಯುವಕನ ಬಲಿಯಾಗಿದ್ದಾನೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾನೆ. ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಯುವಕ ಅಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯುವಕನಲ್ಲಿ H1N1 ಸೋಂಕು  ಪತ್ತೆಯಾಗಿತ್ತು. ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ
ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಗಿರೀಶ ಅರ್ಜುಣಗಿ (ಕುಲಕರ್ಣಿ) ಸಾವನ್ನಪ್ಪಿದ್ದಾನೆ.

ಯುವಕನ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗುತ್ತಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ