ನವಂಬರ್ 9 ರಂದು ಹೆರಿಗೆಗೆಂದು ಬಂದಿದ್ದ ಏಳು ಗರ್ಭಿಣಿಯರು ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಗೊಳಗಾಗಿದ್ದರು. ಮರುದಿನ ಅಂದರೆ ನವಂಬರ್ 10 ರಂದು ಈ ಪೈಕಿ ನಂದಿನಿ, ಲಲಿತಮ್ಮ ಎಂಬವರು ಮೃತಪಟ್ಟಿದ್ದರು. ನವಂಬರ್ 13 ರಂದು ಮತ್ತೊಬ್ಬ ಬಾಣಂತಿ ರೋಜಮ್ಮ ಎಂಬವರು ಮೃತಪಟ್ಟಿದ್ದರು. ಉಳಿದ ನಾಲ್ವರು ಬಾಣಂತಿಯರ ಸ್ಥಿತಿಯೂ ಗಂಭೀರವಾಗಿದ್ದು ಬಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದಷ್ಟೇ ಹೇಳುವ ಜಮೀರ್ ಘಟನೆ ಯಾಕಾಯಿತು, ಏನು ಎಂಬುದರ ಬಗ್ಗೆ ವಿಚಾರಿಸಲು ಖುದ್ದಾಗಿ ಸ್ಥಳಕ್ಕೆ ಭೇಟಿಯೇ ನೀಡಿಲ್ಲ. ಹೀಗಾಗಿ ಸಚಿವರಿಗೆ ಜನರ ಹಿತಕ್ಕಿಂತ ಚುನಾವಣೆಯೇ ಮುಖ್ಯವಾಯಿತೇ ಎಂದು ಜನ ಟೀಕೆ ಮಾಡುತ್ತಿದ್ದಾರೆ.