ಜಿಪಂ ಅಧ್ಯಕ್ಷೆ ಗ್ರಾಮ ವ್ಯಾಸ್ತವ್ಯಕ್ಕೆ ಸಾಥ್ ನೀಡಿದ ಜಿಪಂ ಸಿಇಓ..!

ಬುಧವಾರ, 26 ಸೆಪ್ಟಂಬರ್ 2018 (17:51 IST)
ಕಳೆದ ಎರಡು ಬಾರಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯ ಗ್ರಾಮ ವಾಸ್ತವ್ಯ  ದಿನಾಂಕ ನಿಗದಿಯಾಗಿ ಮುಂದೂಡಲಾಗಿತ್ತು. ಇವತ್ತು ಕೊನೆಗೂ ಗಲಗಲಿ ಗ್ರಾಮದಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷೆ ಗ್ರಾಮ ವಾಸ್ತವ್ಯ ನಡೆಸಿ ನೇರವಾಗಿ ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಭರವಸೆ ನೀಡಿದ್ರು.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ರಾತ್ರಿ 7 ಗಂಟೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ಘಾಟನೆ ನಡೀತು. ಬಳಿಕ ಗ್ರಾಮಸ್ಥರು ತಮ್ಮ ಮೂಲಭೂತ ಸೌಕರ್ಯ ಗಳ ಕುರಿತಾಗಿ ನೇರವಾಗಿ ಅಧಿಕಾರಿಗಳ ಬಳಿ ಕೇಳಿಕೊಂಡರು. ವೈದ್ಯಾಧಿಕಾರಿಗಳ ಅಲಭ್ಯ ತೆಯಿಂದ ಗ್ರಾಮೀಣ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ರು. ಕೂಡಲೇ ಮಹಿಳಾ ವೈದ್ಯಾಧಿಕಾರಿ ನಿಯೋಜಿಸಬೇಕೆಂದ್ರು. ಈ ವೇಳೆ ಮಾತಿನ ಗದ್ದಲವೂ ನಡೀತು.

ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮಧ್ಯೆ ಪ್ರವೇಶಿಸಿ, ಕೂಡಲೇ ಮಹಿಳಾ ವೈದ್ಯಾಧಿಕಾರಿ ನೇಮಿಸ್ತೀವಿ ಎಂದ್ರು. ವೈಯಕ್ತಿಕ ಶೌಚಾಲಯ, ರಸ್ತೆ, ಬೀದಿ ದೀಪ, ನರೇಗಾ ಹಾಗೂ ಆಶ್ರಯ ಮನೆಗಳ ಹಂಚಿಕೆ ಯಲ್ಲಿ ಪಿಡಿಒ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ರು. ಗ್ರಾಮಸ್ಥರು ಅಧಿಕಾರಿಗಳಿಗೆ ಪ್ರಶ್ನೆ ಮೂಲಕ ತಮ್ಮ ಸಮಸ್ಯೆ ಕೇಳಿದ್ರು ಆಗ  ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಶೀಘ್ರ ಪರಿಹರಿಸೋದಾಗಿ  ಭರವಸೆ ನೀಡಿದ್ರು.

ಗ್ರಾಮೀಣ ಪ್ರದೇಶಕ್ಕೂ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸೋ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ. ವೀಣಾ ಕಾಶಪ್ಪನವರ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಇನ್ನು ಗಲಗಲಿಯಲ್ಲಿ  ಶೌಚಾಲಯ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ವೇಳೆ ಜೋರಾಗಿ  ಮಳೆ ಸುರಿಯಲಾರಂಭಿಸಿತು. ಆಗ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಹಾಗೂ ಜಿಪಂ ಸಿಇಒ ಗಂಗೂಬಾಯಿ ಮಾನಕರ್ ಛತ್ರಿ ಆಶ್ರಯದಲ್ಲಿ ಕೆಲಕಾಲ ಬೀದಿ ನಾಟಕ ವೀಕ್ಷಿಸಿದ್ರು. ಮಳೆ ನಿಲ್ಲುವ ಲಕ್ಷಣ ಕಾಣದಿದ್ದಾಗ ಬೀದಿ ನಾಟಕ ಅರ್ಧಕ್ಕೆ ಮೊಟಕುಗೊಳಿಸಲಾಯ್ತು. ಇನ್ನು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ  ಗ್ರಾಮೀಣ ಪ್ರದೇಶಕ್ಕೆ ಸಂಬಂಧಪಟ್ಟ ಬಹುತೇಕ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಒಟ್ಟಿನಲ್ಲಿ ಜಿಪಂ ಅಧ್ಯಕ್ಷೆ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ದಲ್ಲಿ ನಮ್ಮ ಸಮಸ್ಯೆ ಕೇಳಿದ್ದಾರೆ, ಭರವಸೆಗಳಿಗೆ ಸೀಮಿತ ವಾಗದೇ ಪರಿಹಾರ ಸಿಗಲಿ ಎಂದು ಜನ್ರು  ಎಂದು ಕೊಳ್ತಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ