ಸರ್ಕಾರದ ಪೊಲೀಸ್ ಇಲಾಖೆ, ಬಿಬಿಎಂಪಿ, ಕಂದಾಯ ಇಲಾಖೆಗಳು ಮೂರು ದಿನಗಳಿಂದ ಸಾರ್ವಜನಿಕರಿಗೆ ಪುನೀತ ಅವರ ದರ್ಶನದ ವ್ಯವಸ್ಥೆಯನ್ನು ಬಹಳಷ್ಟು ಶ್ರಮ ಮತ್ತು ಶ್ರದ್ಧೆಯಿಂದ ಮಾಡಿವೆ. ಸಣ್ಣ ಪ್ರಮಾದವೂ ಜರುಗದಂತೆ ಎಚ್ಚರ ವಹಿಸಿದಕ್ಕಾಗಿ ಈ ಇಲಾಖೆಗಳು ಅಭಿನಂದನೆಗೆ ಅರ್ಹ. ಈ ಇಲಾಖೆಗಳ ಅಧಿಕಾರಿಗಳ ಕಾರ್ಯ ಪ್ರಶಂಸಾರ್ಹ. ಹೀಗಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇಂಥ ಘಟನೆಗಳು ಜರುಗಿದಾಗ ಶಾಂತಿ ಸುವ್ಯವಸ್ಥೆ ಕಾಪಾಡುವುದು, ವ್ಯವಸ್ಥಿತವಾಗಿ ಜನರಿಗೆ ಅನುಕೂಲ ಕಲ್ಪಿಸುವುದು, ಸುಸೂತ್ರವಾಗಿ ಎಲ್ಲವನ್ನೂ ನಡೆಸಿಕೊಡುವುದು ಸರ್ಕಾರದ ಕರ್ತವ್ಯ . ಆ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದರು. ಸರ್ಕಾರಕ್ಕೆ ಅವರ ಕೃತಜ್ಞಾಪೂರ್ವಕ ಮಾತುಗಳು ದೊಡ್ಡ ಮನೆಯ ದೊಡ್ಡ ಗುಣ ಎಂದರು.