ಆಸನ ಪಾವನವಾಯಿತು

WD
ಗುಂಡನ ಮನೆಗೆ ಅತಿಥಿಯಾಗಿ ಆತನ ಗೆಳೆಯನ್ನು ಆಹ್ವಾನಿಸಿದ್ದ. ಆತನ ಗೆಳೆಯ ಬಂದವನೇ ಅಲ್ಲೇ ಇದ್ದ ಹಳೇಯ ಕುರ್ಚಿಯಲ್ಲಿ ಹೋಗಿ ಕೂತ.

ಗೆಳೆಯನೇ ನಿನ್ನ ಪಾದಾರವಿಂದದಿಂದ ನನ್ನ ಆಸನ ಪಾವನವಾಯಿತು ಎಂದು ಸ್ಟೈಲಾಗಿ ಗುಂಡ ಹೇಳಿದಾಗ, ಯಾಕೋ ಆ ರೀತಿ ಹೇಳ್ತಿದ್ದೀಯಾ ತಮಾಷೆ ಮಾಡ್ತಿದ್ದೀಯಾ ಎಂದು ಗೆಳೆಯ ದಬಾಯಿಸಿದ.

ಹಾಗೇನಿಲ್ಲ, ನಮ್ಮ ಈ ಕುರ್ಚಿ ಕ್ಲೀನ್ ಮಾಡದೆ ವರ್ಷವಾಗಿತ್ತು ಎಂದು ಶಾಂತವಾಗಿಯೇ ಉತ್ತರಿಸಿದ ಗುಂಡ.

ವೆಬ್ದುನಿಯಾವನ್ನು ಓದಿ