ಮೂವರು ಬಾಲಕರು ತಮ್ಮ ತಮ್ಮ ತಂದೆಯರ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಮೊದಲ ಬಾಲಕ ಎಂದ, ನನ್ನ ಅಪ್ಪ ಎಷ್ಟು ವೇಗವಾಗಿ ಓಡುತ್ತಾರೆ ಎಂದರೆ ಬಾಣ ಬಿಟ್ಟು ಅದು ಗುರಿ ತಲುಪುವ ಮೊದಲೇ ಅವರು ಆ ಜಾಗ ಮುಟ್ಟಿರುತ್ತಾರೆ.
ಆಗ ಎರಡನೆಯ ಹುಡುಗ, ಅಷ್ಟೆಯಾ ನನ್ನ ಅಪ್ಪ ಎಂತಹ ಒಳ್ಳೆ ಭೇಟೆಗಾರ ಗೊತ್ತಾ?ಬಂದೂಕಿನಿಂದ ಗುಂಡು ಸಿಡಿಸಿ ಅದು ಪ್ರಾಣಿಯನ್ನು ಕೊಲ್ಲುವ ಮೊದಲೇ ಅವರು ಪ್ರಾಣಿಯನ್ನು ಹಿಡಿದಿರುತ್ತಾರೆ.
ಅಷ್ಟರವರೆಗೆ ಮೌನದಿಂದಿದ್ದ ಮೂರನೆ ಬಾಲಕ, ನನ್ನ ತಂದೆಯ ಹಾಗೆ ನಿಮ್ಮ ತಂದೆ ಯಾರೂ ಇರಲಿಕ್ಕಿಲ್ಲ. ನನ್ನ ತಂದೆ ಸರ್ಕಾರಿ ನೌಕರ. ಕೆಲಸ ಮುಗಿಯುವುದ ಸಂಜೆ 5ಕ್ಕೆ ಆದರೆ ಅರು 4 ಗಂಟೆಗೆ ಮನೆಯಲ್ಲಿರುತ್ತಾರೆ ಎಂದ.