ಶಿವಮೊಗ್ಗ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | shivmogga loksabha election 2019 Live updates

[$--lok#2019#state#karnataka--$]
ಇಬ್ಬರು ಮಾಜಿ ಸಿಎಂಗಳ ಮಕ್ಕಳು ಇಲ್ಲಿ ನೇರ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಇಲ್ಲಿನ ಎದುರಾಳಿಗಳು. 2019 ರ ಲೋಕ ಸಮರದಲ್ಲಿಯೂ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಪುತ್ರ,  ಹಾಲಿ ಸಂಸದ ರಾಘವೇಂದ್ರ ಬಿಜೆಪಿಯಿಂದ ಕಣದಲ್ಲಿದ್ದಾರೆ. 
 
ಇನ್ನು ಮಾಜಿ ಸಿಎಂ ಎಸ್.ಬಂಗಾರಪ್ಪರ ಪುತ್ರ ಎಸ್. ಮಧು ಬಂಗಾರಪ್ಪ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. 
 
ಕೇವಲ ಐದಾರು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರಾಘವೇಂದ್ರ ಗೆಲುವು ಕಂಡಿದ್ರು. ಆಗ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಸ್.ಮಧು ಬಂಗಾರಪ್ಪ 52 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 
 
ಒಂದೆಮ್ಮೊ ಎಸ್. ಬಂಗಾರಪ್ಪರ ಪ್ರಭಾವದಲ್ಲಿದ್ದ ಈ ಕ್ಷೇತ್ರ ಆ ಬಳಿಕ ಯಡಿಯೂರಪ್ಪರ ಕೋಟೆಯಾಗಿ ಮಾರ್ಪಟ್ಟಿದೆ. ಮೈತ್ರಿ ಅಭ್ಯರ್ಥಿ ಇನ್ನಿಲ್ಲದ ಶಕ್ತಿಯೊಂದಿಗೆ ಕಮಲ ಪಾಳೆಯಕ್ಕೆ ಶಾಕ್ ನೀಡಲು ಕಾತುರರಾಗಿದ್ದಾರೆ. 
[$--lok#2019#constituency#karnataka--$]
ಒಟ್ಟು 16, 75, 975 ರಲ್ಲಿ 8,31, 185 ಪುರುಷರು, 8,44,740 ಮಹಿಳೆಯರು ಹಾಗೂ 50 ಇತರೆ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ