ತುಮಕೂರು ಲೋಕಸಭೆ ಚುನಾವಣೆ 2019 ನೇರ ಪ್ರಸಾರ, | Tumkur loksabha election 2019Live updates

[$--lok#2019#state#karnataka--$]

ತುಮಕೂರು ಕ್ಷೇತ್ರ 2019ರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜೆಡಿಎಸ್ ನಿಂದ ಸ್ಪರ್ಧೆ ಮಾಡಿರುವುದಕ್ಕೆ ಗಮನ ಸೆಳೆದಿದೆ. ಬಿಜೆಪಿಯಿಂದ ಹಾಲಿ ಸಂಸದ  ಜಿ.ಎಸ್.ಬಸವರಾಜು ಕಣದಲ್ಲಿದ್ದಾರೆ. 

ಕಾಂಗ್ರೆಸ್ ಭದ್ರಕೋಟೆಯಲ್ಲಿ ಇಬ್ಬರೂ ಹಿರಿಯ ಮುತ್ಸದ್ದಿಗಳು ಚುನಾವಣೆ ಎದುರಿಸುತ್ತಿದ್ದಾರೆ. ಬಿ.ಜೆ.ಪಿಯ ಜಿ.ಎಸ್.ಬಸವರಾಜು ಕಾಂಗ್ರೆಸ್ ನಿಂದ ಮೂರು ಬಾರಿ ಹಾಗೂ ಬಿಜೆಪಿಯಿಂದ ಒಂದು ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಇವರ ರಾಜಕೀಯ ಎದುರಾಳಿ ಜೆಡಿಎಸ್ ನ ಹೆಚ್.ಡಿ.ದೇವೇಗೌಡರು ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. 
 
ಕಾಂಗ್ರೆಸ್ ಭದ್ರಕೋಟೆಯಂತಿರುವ ತುಮಕೂರಿನಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ತೆನೆ ಹಸಿರಾಗಿಸೋಕೆ ಪ್ರಯತ್ನ ಮುಂದುವರಿಸಿದ್ದಾರೆ. 
 
2014 ರ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಪಿ.ಮುದ್ದಹನುಮೇಗೌಡ 73 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 
 
ಬದಲಾದ ಪರಿಸ್ಥಿತಿಯಲ್ಲಿ ಹೆಚ್.ಡಿ.ದೇವೇಗೌಡರು ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಜಿ.ಎಸ್.ಬಸವರಾಜು ತಮ್ಮ ಹಳೆಯ ಸೋಲಿನ ಸೇಡು ತೀರಿಸಿಕೊಳ್ಳೋಕೆ ಸ್ಪರ್ಧೆ ಮಾಡಿದ್ದಾರೆ. 
[$--lok#2019#constituency#karnataka--$]
 
ಒಟ್ಟು 15,94,703 ರಲ್ಲಿ 7,97,512 ಪುರುಷರು, 7,97,191 ಮಹಿಳೆಯರು ಹಾಗೂ 119 ಇತರೆ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ