ಉಡುಗೊರೆ ಉಡುಪಲ್ಲ ಕಾರು

ಮಹಿಳೆಯೊಬ್ಬರು ವೈದ್ಯರಿಗೆ ಫೋನ್ ಮಾಡಿ ವೈದ್ಯರೇ ಅರ್ಜೆಂಟಾಗಿ ತೂಕ ಇಳಿಸುವ ಔಷಧವನ್ನು ಕೊಡಿ ನನ್ನ ಪತಿ ಕೊಟ್ಟಿರುವ ಉಡುಗೊರೆಗೆ ನನ್ನ ದೇಹ ಸರಿಹೊಂದುತ್ತಿಲ್ಲ ಎಂದು ಆತಂಕದಿಂದ ಹೇಳಿದರು.

ಆಗ ವೈದ್ಯರು ಏನು ಚಿಂತೆ ಮಾಡ್ಬೇಡಿ ಮೇಡಂ ನಾಳೆನೇ ನಮ್ಮ ಕ್ಲಿನಿಕ್‌ಗೆ ಬನ್ನಿ. ನಿಮ್ಮ ಪತಿ ನೀಡಿರುವ ಹೊಸ ಬಟ್ಟೆಯೊಳಗೆ ನಿಮ್ಮ ದೇಹ ತೂರಿಕೊಳ್ಳುವಂತೆ ನಾನು ನಿಮಗೆ ಔಷಧಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಆಗ ಮಹಿಳೆ ಕೋಪದಿಂದ ಯಾರು ಹೇಳಿದ್ದು ನಿಮಗೆ ನನ್ನ ಪತಿ ಬಟ್ಟೆ ಉಡುಗೊರೆ ಕೊಟ್ಟಿದ್ದಾರೆಂದು. ಅವರು ನನಗೆ ಕೊಟ್ಟದ್ದು ಹೊಸ ಕಾರು. ಎಂದರು.

ವೆಬ್ದುನಿಯಾವನ್ನು ಓದಿ