ವಯಸ್ಕರಿಗೆ ಪ್ರಿಯವಾದ ಜೋಕುಗಳು

ಸೋಮವಾರ, 28 ಜನವರಿ 2013 (18:36 IST)
PR
ಗಂಡ:ಹಾಲಿನ ಮಾದೇಶನಿಗೆ ನಮ್ಮ ಬೀದಿಲಿರೋಎಲ್ಲಾ ಹೆಂಗಸರ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಾ.ಇದ್ರು. ಹೆಂಡತಿ:ನಿಜ, ಆದ್ರೆ ಪಕ್ಕದ್ಮನೆ ಪಾರೂನಾ ಬಿಟ್ಟು.

ಗಂ:ನಾನು ಸತ್ತರೆ ಏನು ಮಾಡುತ್ತೀಯಾ?
ಹೆಂ: ನಾನೂ ಸಾಯ್ತೀನೇನೋ ಗಂ:ಯಾಕೆ?
ಹೆಂ:ತುಂಬಾ ಖುಷಿ ಆದ್ರೆ ಹಾರ್ಟ್ ಅಟ್ಯಾಕ್ ಆಗುತ್ತೆ.

ಗಂಡ:ಟೀವಿನಲ್ಲಿ ಇವತ್ತು ಏನು ಇದೆ ಅಂತ ನನ್ನ ಹೆಂಡ್ತಿ ಕೇಳಿದಳು.ಅದಕ್ಕೆ ನಾನು ಧೂಳು ಇದೆ ಎಂದು ಹೇಳಿದೆ ಅಷ್ಟೇ.
ಹುಡುಗ:ನಿಂಗೆ ನನ್ನ ಕಂಪನಿ ಬೇಕಾ?ಹುಡುಗಿ:ಹೌದಾ?ನಿಮ್ಮಹತ್ತಿರಎಷ್ಟು ಕಂಪನಿ ಇವೆ?

ಯಾವ ತರಹದ ಹೆಂಡತಿ ಬೇಕು?ಚಂದ್ರನ ತರಹ. ರಾತ್ರಿ ಕಾಣಿಸಿಕೊಳ್ಳಬೇಕು, ಬೆಳಗ್ಗೆ ಕಣ್ಣಿಗೆ ಬೀಳಬಾರದು.
ಪ್ರಿಯಾ, ಮದುವೆಯಾದ ಮೇಲೂ ನನ್ನನ್ನು ಪ್ರೀತಿಸುತ್ತೀಯಾ?ಪ್ರಿಯೆ, ನಿನ್ನ ಗಂಡ ಅವಕಾಶ ನೀಡಿದರೆ.

ಡಾಕ್ಟರ್: ನಿಮ್ಮ ಗಂಡನಿಗೆ ವಿಶ್ರಾಂತಿ ಬೇಕಿದೆ. ಈ ನಿದ್ದೆ ಮಾತ್ರೆಯನ್ನು ನೀವು ತೆಗೆದುಕೊಳ್ಳಿ.
ಸ್ವಾಮೀ,ನನ್ನ ಹೆಂಡ್ತಿ 6 ತಿಂಗಳಿಂದ ನನ್ನ ಜತೆ ಮಾತಾಡಿಲ್ಲ.ಡೈವೋರ್ಸ್ ಮಾಡ್ತೀನಿ.ಅಂಥ ಹೆಂಡತಿಸಿಗೋಕೆ ಪುಣ್ಯಮಾಡಿದ್ರಿ.

ಪಾಪ!ಆಕೆಯನ್ನ ಸಾಯಿಸೋಕೆ ಹೊರಟಿದ್ದೀಯಲ್ಲ,ನಾಚಿಕೆಯಾಗೊಲ್ವೆ!ಆಕೆ ನನ್ನ ಅತ್ತೆ.ಹೌದೇ! ಆಕೆಯನ್ನ ಬಿಡಬೇಡ.

ಹೆಂಗಸು ಮತ್ತು ತೆರಿಗೆ ನಡುವೆ ಸಾಮ್ಯವೇನು?
ಗಂಡಸರು ಅವರೆಡರ ಮೇಲೆ ಸುಳ್ಳು ಹೇಳಲು ಬಯಸುತ್ತಾರೆ.

ನಿಮ್ಮ ಹೆಂಡತಿಗೆ ಬುದ್ಧಿಯೇ ಹೊರಟುಹೋಗಿದೆ.ಅದರಲ್ಲೇನು ಆಶ್ಚರ್ಯ, 25 ವರ್ಷಗಳಿಂದ ನಂಗೆ ಸ್ವಲ್ಪ ಸ್ವಲ್ಪ ಕೊಟ್ಟು ಬುದ್ಧಿ ಖಾಲಿಯಾಗಿರಬೇಕು.

ನಾಪತ್ತೆಯಾದ ಗಂಡನನ್ನು ಹುಡುಕಲು ಪೊಲೀಸರಲ್ಲಿ ಮನವಿ ಸಲ್ಲಿಸಿದ ಹೆಂಡತಿ ಅವರು ಸಿಕ್ಕರೆ,ನನ್ನ ತಾಯಿ ಮನೆಗೆ ಬರಲಿಲ್ಲ ಎಂದು ಹೇಳಿ.

ಮನೆಗೆಲಸದಲ್ಲಿ ಗಂಡನ ಸಹಾಯವೇನು?
ಹೆಂಡತಿ ಕಸ ಗುಡಿಸುವಾಗ ಕಾಲು ಮೇಲೆತ್ತಿ ಕುಳಿತುಕೊಳ್ಳುವುದು.
ಹೆಂಗಸರಿಗೂ ಸರ್ಕಾರೀ ಬಾಂಡ್‌ಗಳಿಗೂ ವ್ಯತ್ಯಾಸವೇನು?
ಬಾಂಡ್‌ಗಳು ಮೆಚ್ಯೂರ್ ಆಗುತ್ತವೆ.

ಹೆಂಡತಿ: ನಾನೆಂದೂ ಹೋಗದಿದ್ದ ಸ್ಥಳಕ್ಕೆ ಇವತ್ತು ಕರೆದುಕೊಂಡು ಹೋಗಿ.
ಗಂಡ: ಸರಿ, ಅಡುಗೆ ಮನೆ ಆಗಬಹುದೆ?

ಹೆಂಡತಿ ಹೊಸಬಳಾಗಿದ್ದಾಗ ಅಂದವಾಗಿರುತ್ತಾಳೆ.ನಿಮ್ಮನ್ನು ಪ್ರೀತಿಸಿದಾಗ ಮುದ್ದಾಗಿರುತ್ತಾಳೆ.ಆಕೆ ಬೇರೆಯವರ ಹೆಂಡತಿ ಆಗಿದಿದ್ದರೆ ಬಹು ಸೊಗಸಾಗಿ ಕಾಣುತ್ತಿದ್ದಳು.

ಹುಡುಗ: ಪ್ರಿಯೆ, ಕುಡಿದ್ರೆನೀನು ಚೆನ್ನಾಗಿ ಕಾಣ್ತೀಯಾ.
ಹುಡುಗಿ: ನಾನು ಕುಡಿಯೊಲ್ಲ.
ಹುಡುಗ: ನಾನು ಕುಡೀತೀನಿ.

ಹೆಂಡತಿ: ಮನೆಗೆ ಏಕೆ ಇಷ್ಟು ಬೇಗ ಬಂದಿರಿ?
ಗಂಡ: ಗೋ ಟು ಹೆಲ್ ಎಂದು ಬಾಸ್ ಆದೇಶ ನೀಡಿದ್ದಾರೆ.
ನಮ್ಮ ವೃದ್ಧಾಶ್ರಮಕ್ಕೆ ಏನಾದರೂ ಕೊಡುಗೆನೀಡಿ,ಅಳಿಯ:ನನ್ನ ಅತ್ತೆಯನ್ನು ಕರೆದುಕೊಂಡು ಹೋಗಿ.

ಹೆಂಡತಿ: ನನ್ನ ಮುಖ ಇಷ್ಟವೋ ಅಥವಾ ದೇಹ ಇಷ್ಟವೋ?
ಗಂಡ: (ಪತ್ನಿಯನ್ನು ಮೇಲೆ ಕೆಳಗೆ ನೋಡಿ) ನಿನ್ನ ಹಾಸ್ಯಪ್ರಜ್ಞೆ!
ಗಂಡ:ಇಂದು ರಾತ್ರಿ ಬೇರೆ ಪೊಸಿಶನ್ ಟ್ರೈ ಮಾಡೋಣ?
ಹೆಂಡತಿ:ಒಳ್ಳೆಯದೇ,ಹಾಗಿದ್ರೆ ರಾತ್ರಿನೀವು ಅಡುಗೆ ಮಾಡಿ,ನಾನು ಟಿವಿ ನೋಡ್ತೇನೆ.

ಮದುವೆಯಾದ ಮೇಲೆ ನಿನ್ನ ಎಲ್ಲಾ ನೋವುಗಳನ್ನು ಹಂಚಿಕೊಳ್ಳುತ್ತೇನೆ.ನನಗೆ ಯಾವ ನೋವೂ ಇಲ್ಲವಲ್ಲ.ನಾನು ಹೇಳಿದ್ದು,ಮದುವೆಯ ನಂತರ!

ಹೆಂಡತಿ ಸಿಟ್ಟಿನಲ್ಲಿ: ನಿನ್ನನ್ನು ಮದುವೆಯಾಗುವಾಗನಾನು ಮೂರ್ಖಳಾಗಿದ್ದೆ
,ಗಂಡ:ಏನ್ಮಾಡೋದು,ನಿನ್ನನ್ನು ಕುರುಡಾಗಿ ಪ್ರೀತಿಸಿದ್ದ ನನಗೆ ಅದುತಿಳೀಲೇ ಇಲ್ಲ.

ಪೈಂಟ್ ಅಂಗಡಿಯಲ್ಲಿ ಹೀಗೆ ಬೋರ್ಡ್ ಬರೆಯಲಾಗಿತ್ತು
.ಪೇಂಟ್ ಬಣ್ಣ ಆರಿಸಲು ಬರುವ ಗಂಡಸರುತಮ್ಮಹೆಂಡತಿಯ ಒಪ್ಪಿಗೆ ಪತ್ರ ತೋರಿಸಬೇಕು.

ಹೆಂಡತಿ: ಪಕ್ಕದ್ಮನೆಯವ ನನ್ನ ರೂಪವನ್ನ ಹೊಗಳ್ತಾನೆ,ನೀವು ಮಾತ್ರ ವಯಸ್ಸಾಗಿದೆಅಂತೀರಿ.
ಗಂಡ: ಹಳೇ ಸಾಮಾನು ಮಾರುತ್ತಾನಲ್ಲ, ಅವನು ತಾನೇ?

ಹೆಂಗಸರು ಕಂಪ್ಯೂಟರಿದ್ದಂತೆ.ಇನ್ನೂ ಸ್ವಲ್ಪ ದಿನ ಕಾದಿದ್ದರೆ ಚೆನ್ನಾಗಿರೋ ಮಾಡೆಲ್ ಸಿಗ್ತಾ ಇತ್ತು ಎಂದು ನೀವು ಪಡೆದ ಕೆಲವೇ ದಿನಗಳಲ್ಲಿ ಅರಿವಾಗುತ್ತೆ.

ಮನೆ ಹತ್ತಿರ ಬರುತ್ತಿದ್ದ ಕಸದ ಲಾರಿಯ ಹಿಂದೆ ಓಡಿ ಬಂದ ಮಹಿಳೆ ಕಸ ಹಾಕಬಹುದೇ?ಲಾರಿಯವ:ಬೇಗ ಒಳಗೆ ನೆಗೆಯಿರಿ.
ಪ್ರೇಮ ವಿವಾಹ ಮತ್ತು ವ್ಯವಸ್ಥಿತ ವಿವಾಹಗಳಲ್ಲಿ ಅಂತಹ ವ್ಯತ್ಯಾಸವಿಲ್ಲ.ಒಂದು ತಲೆಗೆ ಗುಂಡು ಹಾರಿಸಿಕೊಳ್ಳುವುದು ಮತ್ತು ಇನ್ನೊಂದು ನೇಣುಹಾಕಿಕೊಳ್ಳುವುದು.

ಗಂಡ:ಇಂದು ರಾತ್ರಿನೀನು ಅತ್ಯಂತ ಸಂತೋಷವಾಗಿರುವಂತೆ ಮಾಡುತ್ತೇನೆ.
ಹೆಂಡತಿ:ಹಾಗಾದರೆನೀವು ನನ್ನೊಂದಿಗೆ ಇರುವುದಿಲ್ಲವೆ?

ಗಂಡ: ನನಗೆ ಬರುವ ಸಣ್ಣ ಆದಾಯದಲ್ಲಿ ನೀನು ಜೀವನ ನಡೆಸಬಲ್ಲೆಯಾ?
ಹೆಂಡತಿ:ನಡೆಸಬಲ್ಲೆ.ಆದರೆ ನಿನ್ನ ಜೀವನಕ್ಕೆಏನು ಮಾಡುತ್ತೀರಿ?

ನನ್ನ ಮನೆಯಲ್ಲಿ ಕಳ್ಳತನ ಮಾಡಿದವನನ್ನು ನೋಡಬೇಕು.ಯಾಕೆ?ಹೆಂಡತಿ ಕಣ್ಣು ತಪ್ಪಿಸಿ ಮನೆಗೆ ಹೋಗಲು ನನಗೆ ಈವರೆಗೂ ಸಾಧ್ಯವಾಗಿಲ್ಲ.ಅವ ಹೇಗೆ ಮಾಡಿದ?

ವೆಬ್ದುನಿಯಾವನ್ನು ಓದಿ