ಸಕ್ಕರೆ ಡಬ್ಬ

WD
ಪ್ರತಿದಿನ ರಾತ್ರಿ ಮಲಗುವ ಮುನ್ನ ಅಡುಗೆ ಕೋಣೆಗೆ ಬಂದು ಸಕ್ಕರೆ ಡಬ್ಬ ತೆರೆದು ನೋಡುತ್ತಿದ್ದ ತನ್ನ ಗಂಡನ ಬಗ್ಗೆ ಹೆಂಡತಿಗೆ ಕುತೂಹಲ. ಅವರು ಯಾಕೆ ಹಾಗೆ ಮಾಡುತ್ತಾರೆ ಎಂಬುದೇ ಹೆಂಡತಿಗೆ ತಿಳಿಯುತ್ತಿರಲಿಲ್ಲ.

ನೀವು ಮಲಗುವ ಮೊದಲು ಸಕ್ಕರೆ ಡಬ್ಬ ಯಾಕೆ ತೆರೆದು ನೋಡುತ್ತೀರಿ ಎಂಬುದಾಗಿ ಹೆಂಡತಿ ಒಂದು ದಿನ ಗಂಡನಲ್ಲಿ ಕೇಳಿಯೇ ಬಿಟ್ಟಳು.

ಪ್ರತಿದಿನ ಸಕ್ಕರೆ ಮಟ್ಟ ಪರೀಕ್ಷಿಸಬೇಕೆಂದು ಡಾಕ್ಟರ್ ಹೇಳಿದ್ದು ಮರೆತುಬಿಟ್ಟಿಯಾ ಎಂದು ಗಂಡ ಮರುಪ್ರಶ್ನೆ ಹಾಕಿದ ಡಯಾಬಿಟೀಸ್ ಪೇಶೆಂಟ್ ಗಂಡ.

ವೆಬ್ದುನಿಯಾವನ್ನು ಓದಿ