ಐತಿಹಾಸಿಕ ವಸ್ತು ಪ್ರದರ್ಶನ ನಡೆಯುತ್ತಿರುವ ಸ್ಥಳಕ್ಕೆ ಗುಂಡ ತನ್ನ ಸಂಸಾರ ಸಮೇತ ಹೋಗಿದ್ದ.
ಹೆಂಡತಿ, ಮಕ್ಕಳೊಂದಿಗೆ ಸುತ್ತಾಡಿ ಸುಸ್ತಾಗಿದ್ದ ಆತ ಅಲ್ಲೇ ಇದ್ದ ಒಂದು ಕುರ್ಚಿಯಲ್ಲಿ ಕುಳಿತ.
ಆಗ ಒಬ್ಬವ ಓಡೋಡಿ ಬಂದು, ಸರ್ ಅದರಲ್ಲಿ ಕುಳಿತುಕೊಳ್ಳಬೇಡಿ, ಅದು ಟಿಪ್ಪು ಸುಲ್ತಾನ್ ಕುಳಿತ ಕುರ್ಚಿ ಎಂದಾಗ, ಕುಪಿತಗೊಂಡ ಗುಂಡ, ನೀ ಹೋಗಯ್ಯ ಅವ ಬಂದಾಗ ನಾ ಕುರ್ಚಿ ಬಿಟ್ಟುಕೊಡುತ್ತೇನೆ ಎಂದ.