ಚೆನ್ನನ ಹೆಂಡತಿ ಚೆನ್ನಿಗೆ ತುಂಬಾ ಮಾತು. ಒಮ್ಮೆ ಮಾತಿಗೆ ಬಾಯಿ ತೆರೆದರೆ, ಅದು ಮುಚ್ಚುವುದೇ ಇಲ್ಲ. ಚೆನ್ನನಿಗೆ ಇದೊಂದು ದೊಡ್ಡ ಸಮಸ್ಯೆಯಾಗಿತ್ತು. ಹೇಗಪ್ಪಾ ಇವಳ ಬಾಯಿ ಮುಚ್ಚಿಸುದು ಅಂತ ಯೋಚನೆ ಮಾಡಿ ಕೊನೆಗೊಂದು ಉಪಾಯ ಕಂಡುಕೊಂಡ.
ಒಂದು ದಿನ ಚೆನ್ನಿಯನ್ನು ಕರೆದು, ನೀನು ಬಾಯಿಮುಚ್ಚಿಕೊಂಡಿದ್ದರೆ, ತುಂಬಾ ಚೆನ್ನಾಗಿ ಕಾಣಿಸ್ತೀಯಾ ಎಂದು ಹೇಳಿದ. ಅಂದಿನಿಂದ ಚೆನ್ನಿಯ ಮಾತು ಕಡಿಮೆಯಾಯಿತು!