ದೂರವಾಣಿ ಕರೆ ಮಾಡಲೆಂದು ಒಬ್ಬ ಎಸ್‌ಟಿಡಿ ಬೂತ್‌ಗೆ ಬಂದಾಗ ಮತ್ತೊಬ್ಬ ವ್ಯಕ್ತಿಯು ಫೋನ್ ರಿಸೀವರ್ ಹಿಡಿದುಕೊಂಡು ಸುಮ್ಮನೇ ಇದ್ದ. ಮಾತನಾಡುತ್ತನೇ ಇರಲಿಲ್ಲ.
ಇಪ್ಪತ್ತು ನಿಮಿಷ ಕಳೆದರೂ ಒಂದೂ ಮಾತನಾಡದೇ ಇದ್ದುದನ್ನು ನೋಡಿ ತಾಳ್ಮೆ ಕಳೆದುಕೊಂಡ ಮೊದಲನೇ ವ್ಯಕ್ತಿಯು, ನೀವಂತೂ ಫೋನ್‌ನಲ್ಲಿ ಮಾತನಾಡುದಿಲ್ಲ. ನಾನಾದ್ರೂ ಮಾತನಾಡ್ತೇನೆ ಎಂದಾಗ, ನಿಮಗೇನು ಗೊತ್ತು? ನಾನು ನನ್ನ ಹೆಂಡತಿ ಬಳಿ ಫೋನ್‌ನಲ್ಲಿ ಮಾತನಾಡುತ್ತಾ ಇದ್ದೇನೆ ಎಂದು ದಬಾಯಿಸಿದ.