ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತೀ ತಿಂಗಳು ₹ 8,500: ಪ್ರಿಯಾಂಕಾ

Sampriya

ಗುರುವಾರ, 16 ಮೇ 2024 (15:11 IST)
Photo Courtesy X
ರಾಯ್ ಬರೇಲಿ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ ಕೊಟ್ಟ ಗ್ಯಾರಂಟಿಯಂತೆ ಮಹಿಳೆಯರ ಖಾತೆಗೆ ಪ್ರತೀ ತಿಂಗಳು ₹ 8,500 ಜಮೆ ಮಾಡಲಾಗುವುದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಗುರುವಾರ ನಡೆದ ಮಹಿಳೆಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಯಾದರೆ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್‌ ನಾಯಕಿ ತಿಳಿಸಿದರು.

ದೇಶದಾದ್ಯಂತ ನಮ್ಮ ಸಹೋದರಿಯರು ಉತ್ಸಾಹದಿಂದ ಇಂಡಿಯಾ ಸರ್ಕಾರವನ್ನು ರಚಿಸಲು ಸಿದ್ಧರಾಗಿದ್ದಾರೆ. ಸರ್ಕಾರ ಬಂದರೆ ಜುಲೈನಿಂದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹ 8500 ಅಂದರೆ ವಾರ್ಷಿಕವಾಗಿ 1 ಲಕ್ಷ ರೂ. ಠೇವಣಿ ಇಡುತ್ತೇವೆ. ಇದರಿಂದ ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಬಹುದು ಎಂದರು.

ಅಂತೆಯೇ ಆಶಾ, ಅಂಗನವಾಡಿ ಹಾಗೂ ಅಡುಗೆಯ ಸಹೋದರಿಯರ ಗೌರವಧನಕ್ಕೆ ಕೇಂದ್ರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು. 25 ಲಕ್ಷ ರೂ.ಗಳ ವಿಮಾ ಯೋಜನೆ ನಿಮ್ಮನ್ನು ವೈದ್ಯಕೀಯ ವೆಚ್ಚದ ಕೂಪದಿಂದ ಹೊರತರಲಿದೆ ಎಂದು ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ