ಜನರು ಸಾಯುತ್ತಿದ್ದಾರೆ, ಮೋದಿ ನಗುತ್ತಿದ್ದಾರೆ: ರಾಹುಲ್ ಗಾಂಧಿ

ಬುಧವಾರ, 16 ನವೆಂಬರ್ 2016 (14:41 IST)
ಬ್ಯಾಂಕ್ ಮತ್ತು ಎಟಿಎಂ ಮುಂದೆ ಸರತಿ ಸಾಲಲ್ಲಿ ನಿಂತುಕೊಂಡು ಜನರು ಸಾಯುತ್ತಿದ್ದಾರೆ. ಆದರೆ ಮೋದಿ ನಗುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಸರತಿ ಸಾಲಲ್ಲಿ ನಿಂತಿದ್ದ ವೇಳೆ ಕುಸಿದು ಬಿದ್ದು 18ರಿಂದ 20 ಜನರು ಸತ್ತಿದ್ದಾರೆ. ಆದರೆ ಪ್ರಧಾನಿ ನಗುತ್ತಿದ್ದಾರೆ. ಅವರು ನಗುತ್ತಿದ್ದಾರೋ ಅಥವಾ ಅಳುತ್ತಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ವ್ಯಂಗ್ಯವಾಡಿದ್ದಾರೆ. 
 
ಅಷ್ಟೇ ಅಲ್ಲದೇ ನೋಟು ನಿಷೇಧದ ಬಗ್ಗೆ ಬಿಜೆಪಿ ಜನರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. 
 
ಪ್ರಧಾನಿ ಮೋದಿ ನೋಟು ನಿಷೇಧ ಮಾಡುವುದಕ್ಕಿಂತ ಕೆಲವು ದಿನಗಳ ಮೊದಲು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜನರು ಕೋಟಿಗಟ್ಟಲೆ ಹಣವನ್ನು ಠೇವಣಿ ಇಟ್ಟಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. 
 
ಪ್ರಧಾನಿ ಮೋದಿ ನೋಟು ನಿಷೇಧ ಜಾರಿಗೊಳಿಸುವುದಕ್ಕಿಂತ ಮೊದಲೇ ಬಿಜೆಪಿ ಕಾರ್ಯಕರ್ತರು ಹೊಸ 2,000 ರೂಪಾಯಿ ನೋಟುಗಳ ಕಟ್ಟನ್ನು ಕೈಯ್ಯಲ್ಲಿ ಹಿಡಿದುಕೊಂಡಿರುವ ಫೋಟೋಗಳು ಅಂತರ್ಜಾಲದಲ್ಲಿ ಓಡಾಡುತ್ತಿವೆ. ಮೋದಿ ಸರ್ಕಾರದ ಈ ನಡೆ ದೊಡ್ಡ  ಹಗರಣವಾಗಿ ಪರಿವರ್ತನೆಯಾಗಲಿದೆ ಎಂದು ರಹುಲ್ ಹೇಳಿದ್ದಾರೆ. 
 
ಚಿಂತನೆ ಮಾಡದೆ ಏಕಾಏಕಿ ಪ್ರಧಾನಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದನ್ನು ಹಿಂದಕ್ಕೆ ಪಡೆಯಲಿ ಎಂದು ನಾವು ಬಯಸುವುದಿಲ್ಲ. ಕನಿಷ್ಠ ಪಕ್ಷ ಜನರು ಎದುರಿಸುತ್ತಿರುವ ಕಷ್ಟಗಳನ್ನು ಪರಿಹರಿಸಲಿ ಎಂದು ರಾಹುಲ್ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ