ಭಾರತದಲ್ಲಿಂದು 35,178 ಕೊರೊನಾ ಕೇಸ್ ಪತ್ತೆ, 440 ಮಂದಿ ಸಾವು

ಬುಧವಾರ, 18 ಆಗಸ್ಟ್ 2021 (10:04 IST)
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೊಂಕಿನ ಪ್ರಕರಣಗಳಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 35,178 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 35,178 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ3,22,85,857ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 440 ಮಂದಿ ಮೃತಪಟ್ಟಿದ್ದು, ಈ ಮೂಲಕ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,32,519 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 3,67,415 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಪ್ರಕರಣಗಳು: 3,22,85,857
ಒಟ್ಟು ಚೇತರಿಕೆಗಳು: 3,14,85,923
ಸಕ್ರಿಯ ಪ್ರಕರಣಗಳು: 3,67,415
ಸಾವಿನ ಸಂಖ್ಯೆ: 4,32,519
ಲಸಿಕೆ ಪಡೆದ ಒಟ್ಟು: 56,06,52,030 (ಕಳೆದ 24 ಗಂಟೆಗಳಲ್ಲಿ 55,05,075)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ