ಕರ್ನಾಟಕ ನೈಋತ್ಯ ರೈಲ್ವೇ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

Krishnaveni K

ಸೋಮವಾರ, 26 ಫೆಬ್ರವರಿ 2024 (13:44 IST)
Photo Courtesy: Twitter
ನವದೆಹಲಿ: ಕರ್ನಾಟಕದ ನೈಋತ್ಯ ವಲಯದ ರೈಲು ಹಳಿ ಮೇಲ್ದರ್ಜೆಗೇರಿಸುವ ನೂತನ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

15 ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಇಂದು ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಅಮೃತ ಭಾರತ ನಿಲ್ದಾಣ ಯೋಜನೆಯಡಿ ಸುಮಾರು 372,13 ಕೋಟಿ ರೂ. ವೆಚ್ಚದಲ್ಲಿ 15 ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ.

ನೈಋತ್ಯ ರೈಲ್ವೇ ವ್ಯಾಪ್ತಿಯ ಕರ್ನಾಟಕದ ಕೆಂಗೇರಿ(21 ಕೋಟಿ), ಕೆಆರ್ ಪುರಂ (21.1 ಕೋಟಿ), ಬಂಗಾರಪೇಟೆ(21.5ಕೋಟಿ),  ಚನ್ನಪಟ್ಟಣ(20.9 ಕೋಟಿ), ಧರ್ಮಪುರಿ(25.4 ಕೋಟಿ ರೂ.), ದೊಡ್ಡಬಳ್ಳಾಪುರ (21.3 ಕೋಟಿ), ಮಂಡ್ಯ (20.1 ಕೋಟಿ), ರಾಮನಗರ(21 ಕೋಟಿ), ಹಿಂದೂಪುರ(23.9 ಕೋಟಿ), ತುಮಕೂರು(24.1 ಕೋಟಿ), ವೈಟ್ ಫೀಲ್ಡ್(23.3 ಕೋಟಿ), ಕುಪ್ಪಂ(17.6 ಕೋಟಿ), ಮಲ್ಲೇಶ್ವರ(20 ಕೋಟಿ), ಮಾಲೂರು (20.4 ಕೋಟಿ) ಸೇರಿದಂತೆ ಸೌಕರ್ಯಾಭಿವೃದ್ಧಿಯಲ್ಲಿ ಹಿಂದುಳಿದ, ಅವ್ಯವಸ್ಥೆ ಹೊಂದಿರುವ ಸುಮಾರು 15 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

ಅಮೃತ ಭಾರತ ಯೋಜನೆಯಡಿ ದೇಶದ 1275 ರೈಲ್ವೇ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಸರ್ಕಾರ ಸಜ್ಜಾಗಿದೆ. ನಿಲ್ದಾಣದಲ್ಲಿ ಶೌಚಗ್ರಹ, ವಿಶ್ರಾಂತಿ ಗೃಹ, ಟಿಕೆಟ್ ಕೌಂಟರ್ ಇತ್ಯಾದಿ ಘಟಕಗಳನ್ನು ಆಧುನೀಕರಣಗೊಳಿಸಲಾಗುತ್ತದೆ. ಒಟ್ಟಾರೆಯಾಗಿ ರೈಲ್ವೇ ನಿಲ್ದಾಣಗಳನ್ನು ಪ್ರಯಾಣಿಕರನ್ನು ಆಕರ್ಷಿಸುವಂತೆ ಆಧುನೀಕರಣಗೊಳಿಸಲು ಈ ಯೋಜನೆ ರೂಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ