ಅಶ್ಲೀಲ ವಿಡಿಯೋ ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ

ಶುಕ್ರವಾರ, 10 ನವೆಂಬರ್ 2023 (08:36 IST)
ಸಂಬಂಧಿಕರ ಅಪ್ರಾಪ್ತ ಮಗಳಿಗೆ ಕೆಲವು ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕವಾಗಿ ಪ್ರಚೋದಿಸಲು ಪ್ರಯತ್ನಿಸಿದ್ದ. ಬಳಿಕ ಬಾಲಕಿಯ ಮೇಲೆ ಎರಡು ಬಾರಿ ಕಾಮುಕ ಅತ್ಯಾಚಾರವೆಸಗಿದ್ದ. ಈ ಘಟನೆ ಬಳಿಕ ಸ್ವಪ್ನಿಲ್ ಗುಜರಾತ್‌ನಿಂದ ತಲೆಮರೆಸಿಕೊಂಡು ಮಹಾರಾಷ್ಟ್ರಕ್ಕೆ ತೆರಳಿದ್ದ ಆರೋಪಿಯನ್ನು ಬಂಧಿಸಿಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 
ವಡೋದರಾ ನಿವಾಸಿಯಾಗಿದ್ದ ಸ್ವಪ್ನಿಲ್ ಎಂಬವನು 10 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಅಮಾನುಷ ಘಟನೆ ನಡೆದಿದೆ.  ಟೆಕ್ಕಿ ಸ್ವಪ್ನಿಲ್  ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಈತ ತನ್ನ ಅಣ್ಣನ ಸಂಬಂಧಿಕರ ಮನೆಯಲ್ಲಿದ್ದ.  ಆದರೆ ಮನೆಯಲ್ಲಿದ್ದ ಮಾಲೀಕನ ಅಪ್ರಾಪ್ತ ಮಗಳ ಮೇಲೆ  ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
 
ಪೊಲೀಸರು ಸ್ವಪ್ನಿಲ್ ಸುಳಿವು ಪಡೆದು ಮಹಾರಾಷ್ಟ್ರಕ್ಕೆ ತೆರಳಿ ಬಂಧಿಸಿದ್ದಾರೆ. ಪೊಲೀಸರು ಸಂತ್ರಸ್ತ ಬಾಲಕಿಯಿಂದ  ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ. ಬಾಲಕಿಗೆ ತನ್ನ ಮೇಲೆ ಟೆಕ್ಕಿ ಯಾವಾಗ ಅತ್ಯಾಚಾರ ಮಾಡಿದ್ದಾನೆಂಬ ವಿಷಯವನ್ನೂ ಮರೆತಿದ್ದು, ಪೊಲೀಸರಿಗೆ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲವೆಂದು ತಿಳಿದುಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ